ನವದೆಹಲಿ : ನಾವು ಸತ್ಯದ ಬೆನ್ನಿಗೆ ನಿಂತು ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್ ಸರ್ಕಾರವನ್ನು ಭಾರತದಿಂದ ಖಾಲಿ ಮಾಡಿಸುತ್ತೇವೆ, ಇದು ನನ್ನ ಗ್ಯಾರಂಟಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ವೋಟ್ ಚೋರಿʼ ವಿರೋಧಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಆರ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸತ್ಯ ಅತ್ಯಂತ ಅವಶ್ಯಕ ಎಂದು ಗಾಂಧಿ ಹೇಳುತ್ತಿದ್ದರು. ನಮ್ಮ ಧರ್ಮದಲ್ಲಿ ಸತ್ಯವನ್ನ ಅತ್ಯಂತ ಮುಖ್ಯ ಎಂದು ಭಾವಿಸಲಾಗಿದೆ. ಅದಕ್ಕಾಗಿ ಧರ್ಮದಲ್ಲಿ ʻಸತ್ಯಂ, ಶಿವಂ ಸುಂದರಂʼ ಎಂದು ಉಲ್ಲೇಖಿಸಿದೆ. ಆದರೆ ವಿಶ್ವ ಸತ್ಯ ಅಲ್ಲ ಶಕ್ತಿಯನ್ನು ನೋಡುತ್ತದೆ. ಯಾರ ಬಳಿಕ ಶಕ್ತಿ ಇದೆ ಅವರನ್ನು ಒಪ್ಪಿಕೊಳ್ಳುತ್ತೆ. ಈ ವಿಚಾರಧಾರೆ ಆರ್‌ಎಸ್‌ಎಸ್ ಸಿದ್ಧಾಂತ. ಅವರಿಗೆ ಸತ್ಯ ಅಲ್ಲ ಅಧಿಕಾರ ಮುಖ್ಯ. ಈಗ ಅಸತ್ಯ – ಸತ್ಯದ ನಡುವೆ ಹೋರಾಟ ನಡೆಯತ್ತಿದೆ. ನಾವು ಸತ್ಯದ ಹಿಂದೆ ನಿಂತು ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್ ಸರ್ಕಾರವನ್ನ ದೇಶದಿಂದ ಖಾಲಿ ಮಾಡಿಸುತ್ತೇವೆ. ಇದು ನನ್ನ ಗ್ಯಾರಂಟಿ ಎಂದು ಗುಡುಗಿದ್ದಾರೆ.
ಚುನಾವಣೆ ವೇಳೆ ಹತ್ತು ಸಾವಿರ ನೀಡುತ್ತಾರೆ. ಆದರೆ ಆಯೋಗ ಯಾವುದೇ ಆಕ್ಷೇಪಣೆ ಮಾಡುವುದಿಲ್ಲ. ಚುನಾವಣಾ ಆಯೋಗ ಬಿಜೆಪಿ ಸರ್ಕಾರದ ಜೊತೆಗೆ ನಿಂತು ಕೆಲಸ ಮಾಡುತ್ತಿದೆ. ಆಯೋಗಕ್ಕಾಗಿ ಈ ಸರ್ಕಾರ ಹೊಸ ಕಾನೂನು ಜಾರಿ ಮಾಡಿತು. ಹಾಗಾಗಿ ಆಯುಕ್ತರು ಏನೇ ಮಾಡಿದರು ಅವರ ವಿರುದ್ಧ ಕ್ರಮ ಇಲ್ಲ. ಆಯೋಗದ ಆಯುಕ್ತರಿಗೆ ಹೇಳುತ್ತೇನೆ ಮೋದಿ ಚುನಾವಣಾ ಆಯುಕ್ತರಲ್ಲ, ಮುಂದೆ ಅಸತ್ಯದ ಜೊತೆಗೆ ನಿಂತಿರುವ ಅಧಿಕಾರಿಗಳನ್ನ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಹಾಸನ | ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದು ಬಾಲಕಿ ಸಾವು



















