ಹುಬ್ಬಳ್ಳಿ : ಅಭಿವ್ಯಕ್ತಿ ಸ್ವಾತಂತ್ರ್ಯ ಮೋಟಕುಗೊಳಿಸುವ ಕೆಲಸ ಎಂದೂ ಮಾಡಲ್ಲ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಸಂಘಟನೆಯನ್ನು ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಹಕ್ಕುಗಳ ರಕ್ಷಣೆಗಾಗಿ ಸಂಘಟನೆಯಾಗಬೇಕು, ಹೋರಾಟ ನಡೆಸಬೇಕು. ವೆಬ್ ಪೋರ್ಟಲ್, ಯ್ಯೂಟ್ಯೂಬ್‌ಗಳಿಗೆ ಕೂಡಾ ಪರವಾನಗಿ ಪಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಪತ್ರಕರ್ತರು ಸತ್ಯ ಹೇಳುವ ಕೆಲಸ ಮಾಡಬೇಕು. ಎಲೆಕ್ಟ್ರಾನಿಕ್ ಮೀಡಿಯಾಗಳ ಮೇಲೆ ಜನ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ಆ ಭರವಸೆ ಸುಳ್ಳಾಗದಂತೆ ನೋಡಿಕೊಳ್ಳಬೇಕು. ಗಾಳಿ ಸುದ್ದಿ, ಊಹಾ ಪತ್ರಿಕೋದ್ಯಮ ಮಾಡಬಾರದು. ಪರಿಶೀಲನೆ ಮಾಡಿ ಸುದ್ದಿ ಪ್ರಸಾರ ಮಾಡಬೇಕು ಎಂದಿದ್ದಾರೆ.
ನಾನು ಎಂದಿಗೂ ನನ್ನ ಬಗ್ಗೆ ಒಳ್ಳೆಯದನ್ನು ಬರಿಯಿರಿ ಎಂದು ಹೇಳಿಲ್ಲ, ಟೀಕೆ ಮಾಡಿ ಬರೆದಾಗ ಯಾಕೆ ಬರಿದಿರಿ ಅಂತ ಕೇಳಿಯೂ ಇಲ್ಲ, ಕೇಳುವುದು ಇಲ್ಲ. ಸುಳ್ಳುಸುದ್ದಿಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದನ್ನು ನಿಯಂತ್ರಣ ಮಾಡಲು ಕಾನೂನು ಮಾಡಲು ಮುಂದಾಗಿದ್ದೇವೆ. ಪತ್ರಕರ್ತರು ಶಿಕ್ಷಕರಿದ್ದಂತೆ, ನೀವು ನ್ಯಾಯವಾಗಿರಿ. ನೈಜ ವಿಚಾರವನ್ನು ಪ್ರಚಾರ ಮಾಡಿ. ಸತ್ಯ ಇದೆಯಾ ಎನ್ನುವುದನ್ನು ಪರಿಶೀಲಿಸಿ. ಪತ್ರಕರ್ತರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ. ನಿಮ್ಮ ಜೊತೆ ಇರುತ್ತೇವೆ, ಆದರೆ ಸತ್ಯವನ್ನು ಬರೆಯಿರಿ ಎಂದು ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.