ವಿಜಯಪುರ: ಬಿಹಾರ ಚುನಾವಣೆ ವಿಚಾರವಾಗಿ ಮಾತನಾಡಿದ ಸಚಿವ ಎಂ ಬಿ ಪಾಟೀಲ್ ನಮ್ಮ ಬೆಂಗಳೂರು ಸೆಂಟ್ರಲ್ ನಲ್ಲೂ ಮತ ಕಳ್ಳತನದ ಆಗಿದ್ದನ್ನ ನೋಡಿದ್ದೇವೆ. ಇಲೆಕ್ಷನ್ ಕಮೀಷನ್ ರಿಫಾರ್ಮಸ್ ತರಬೇಕು. ಸುಮ್ಮನೆ ಅಫಿಡೆವಿಟ್ ಹಾಕಿ, ಅದು ಮಾಡಿ, ಇದು ಮಾಡಿ ಅಂತಾ ಹೇಳಿದ್ರೆ ಆಗಲ್ಲ, ರಿಫಾರ್ಮ್ ತಂದು ಚುನಾವಣೆ ಪಾರದರ್ಶಕವಾಗಿ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷ, ನಮ್ಮ ದೆಹಲಿಯ ನಾಯಕರು ಇದರ ಬಗ್ಗೆ ಎನಲೈಸ್ ಮಾಡ್ತಿದ್ದಾರೆ. ಫಲಿತಾಂಶದಿಂದ ಒಂದು ರೀತಿ ಸಂಶಯ ಉಂಟಾಗಿದೆ. ಮೇಲ್ನೋಟಕ್ಕೆ ಇದು ಮತ ಚೋರಿ ಸಂಶಯ ಮೂಡುತ್ತದೆ. ಜನರ ತೀರ್ಪು ಸ್ವಾಗತ ಮಾಡುತ್ತೇನೆ. ಮಹಾ ಘಟಬಂಧನಕ್ಕೆ ಯಾರು ಮತ ಹಾಕಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದಿದ್ದಾರೆ.
ಸಿಎಂ, ಡಿಎಂಸಿ ರಿಂದ ಹೈಕಮಾಂಡ್ ಭೇಟಿ ವಿಚಾರ
ಹೌದು ಭೇಟಿಯಾಗಿದ್ದಾರೆ. ರಾಜಕೀಯ ವಿಷಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆನೋ ಪುನಃರಚನೆ ಬಗ್ಗೆನೋ ಗೊತ್ತಿಲ್ಲ. ಹೈಕಮಾಂಡ್ ನಾಯಕರೇ ಇದರ ಬಗ್ಗೆ ನಿರ್ಧಾರ ಮಾಡ್ತಾರೆ. ಎಲ್ಲ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಿಸಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದಿದ್ದಾರೆ.
ಇದನ್ನೂ ಓದಿ : ಕೇಂದ್ರದ RITES ಸಂಸ್ಥೆಯಲ್ಲಿ 40 ಮ್ಯಾನೇಜರ್ ಹುದ್ದೆಗಳ ನೇಮಕ : ಡಿಗ್ರಿ ಮುಗಿಸಿದವರಿಗೆ ಗುಡ್ ನ್ಯೂಸ್



















