ವಿಜಯಪುರ: ಶಾಸಕರು ಯತ್ನಾಳ್ ಗೆ ಜೀವ ಬೆದರಿಕೆ ಹಾಕಿರುವ ಆಡಿಯೋ, ವಿಡಿಯೋ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮುಸ್ಲಿಂ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಆಡಿಯೋ, ವಿಡಿಯೋ ಬಗ್ಗೆ ನಮಗೆ ಸಂಬಂಧವಿಲ್ಲ. ನಾವು ಯತ್ನಾಳ್ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೇವೆ. ಏ. 20ರ ನಂತರ ಹೋರಾಟ ನಡೆಸುತ್ತೇವೆ. ಆದರೆ, ವೈರಲ್ ಆಗಿರುವ ಆಡಿಯೋ ಹಾಗೂ ವಿಡಿಯೋಗೂ ನಮಗೂ ಯಾವುದೇ ಸಂಬಂಧ ಇಲ್ಲ. ವಿಡಿಯೋ ಹಾಗೂ ಆಡಿಯೋ ಮಾಡಿ ಹರಿಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಮುಸ್ಲಿಂರ ಹೆಸರಿನಲ್ಲಿ ಯಾರೋ ಕಿಡಗೇಡಿಗಳು ಆಡಿಯೋ, ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ಪೊಲೀಸರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಇದರಲ್ಲಿ ಯತ್ನಾಳ್ ಕೈವಾಡ ಕೂಡ ಇರಬಹುದು. ಈ ಬಗ್ಗೆ ತನಿಖೆ ಮಾಡಬೇಕು ಎಂದು ಮುಸ್ಲಿಂ ಮುಖಂಡ ಹಮೀದ್ ಮುಶ್ರಫ್ ಮನವಿ ಮಾಡಿದ್ದಾರೆ.