ನವದೆಹಲಿ: ನಿರ್ಭಯಾ ಪ್ರಕರಣದ ನಂತರ ಲೆಕ್ಕವಿಲ್ಲದಷ್ಟು ಅಸಹ್ಯಕರ ಘಟನೆಗಳನ್ನು ಮರೆತಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾದಲ್ಲಿ ಇತ್ತೀಚೆಗೆ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ಮಹಿಳೆಯ ವಿರುದ್ಧದ ಇಂತಹ ಹೇಯ ಕೃತ್ಯಗಳನ್ನು ತಡೆಯಲು ಸಾಮಾಜಿಕ ಬದಲಾವಣೆಯ ತುರ್ತು ಅಗತ್ಯತೆ ಇದೆ ಎಂದು ಹೇಳಿದ್ದಾರೆ. ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ತ್ವರಿತ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಮಹಿಳೆಯ ಜೀವನದ ಎಲ್ಲ ಹಂತಗಳಲ್ಲಿಯೂ ಅವರ ಸುರಕ್ಷತೆ ಮತ್ತು ಘನತೆ ಕಾಪಾಡಬೇಕಿದೆ. ಹೀಗಾಗಿ ಬದಲವಾಣೆ ಅವಶ್ಯವಾಗಿದೆ. ಇನ್ನೂ ನೋವಿನ ಸಂಗತಿ ಎಂದರೆ, ಕೋಲ್ಕತ್ತಾ ಪ್ರಕರಣ ಒಂದೇ ಪ್ರಕರಣವಲ್ಲ. ಇದು ಮಹಿಳೆಯರ ವಿರುದ್ಧ ಸರಣಿ ಅಪರಾಧಗಳ ಭಾಗ. ಮಹಿಳೆಯರನ್ನು ಪ್ರತಿನಿತ್ಯ ಕಿರುಕುಳ, ದೌರ್ಜನ್ಯ ಹಾಗೂ ಕ್ರೌರ್ಯಕ್ಕೆ ನೂಕಲು ಅವಕಾಶ ನೀಡುವ ‘ಅಸಹ್ಯಕರ ಸಾಮೂಹಿಕ ಸ್ಥಿತಿ ಎಂದು ಬೇಸರ ವ್ಯಕ್ತಪಡಿದ್ದಾರೆ.
ಇನ್ನು ಮುಂದೆ ಸಮಾಜದಲ್ಲಿ ಇದು ನಿಲ್ಲಬೇಕು. ನಾವು ನಿರ್ಭಯಾ ಘಟನೆಯ ನಂತರ ಅಂದರೆ ಸುಮಾರು 12 ವರ್ಷಗಳಲ್ಲಿ ಅಸಂಖ್ಯಾತ ಅತ್ಯಾಚಾರಗಳನ್ನು ನಾವು ಮರೆತು ಹೋಗಿದ್ದೇವೆ. ಈ ಮರೆವು ಕೂಡ ಅಸಹ್ಯಕರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.