ಬೆಂಗಳೂರು: ಪಾಕಿಸ್ತಾನ(Pakistan) ಹತೋಟಿಯಲ್ಲಿಡಬೇಕಿದೆ. ಈ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸೈನಿಕರಿಗಾಗಲಿ, ಜನರಿಗಾಗಲಿ ತೊಂದರೆ ಆಗಬಾರದು. ಪಾಕಿಸ್ತಾನವನ್ನು ಹತೋಟಿಯಲ್ಲಿ ಇಡಲು ನಾವು ಪ್ರಧಾನಿಗೆ ಬೆಂಬಲ ಕೊಟ್ಟಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದದಾರೆ. ದೇಶದಲ್ಲಿ ಇರುವ ಭಾವನೆ ಜೊತೆಗೆ ಎಲ್ಲಾ ಪಕ್ಷಗಳು ಅವರಿಗೆ ಅಧಿಕಾರ ನೀಡಿದ್ದೇವೆ. ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಅಧಿಕಾರ ಮಾಡಲು ಕೊಟ್ಟಿದ್ದೇವೆ. ಅದನ್ನು ಅವರು ಉಪಯೋಗ ಮಾಡಿಕೊಳ್ಳಲಿ ಎಂದಿದ್ದಾರೆ.
ಪ್ರಧಾನ ಮಂತ್ರಿಗಳು (Narendra Modi) ಅಧಿವೇಶನದಲ್ಲಿ ಇರಬೇಕು. ಪ್ರಧಾನಮಂತ್ರಿಗಳು ಯಾವೆಲ್ಲ ಕ್ರಮ ತೆಗೆದುಕೊಂಡಿದ್ದಾರೆ ಅದನ್ನು ಹೇಳಬೇಕು. ಕೆಲವೊಂದು ಗುಪ್ತ ಕಾರ್ಯಸೂಚಿಗಳಿರುತ್ತವೆ. ಅದನ್ನು ಮಾಡಲಿ ಎಂದಿದ್ದಾರೆ.
ಮೋದಿ ತಲೆ ಇಲ್ಲದ ಫೋಟೋ ಹಾಕಿ ಗಾಯಬ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ವಿಚಾರ ನನಗೆ ಗೊತ್ತಿಲ್ಲ. ಯಾವುದೇ ವ್ಯಕ್ತಿಗೆ, ಯಾರೇ ಇರಲಿ, ಅದು ಪ್ರಧಾನಮಂತ್ರಿಯೇ ಇರಲಿ, ಯಾವುದೇ ಮುಖಂಡರಿಗೇ ಇರಲಿ, ಅವರ ಗೌರವಕ್ಕೆ ಧಕ್ಕೆ ತರುವಂತ ಕೆಲಸ ಮಾಡಬಾರದು ಎಂದಿದ್ದಾರೆ.