ಮೈಸೂರು: ಅಡ್ರೆಸ್ ಇಲ್ಲದ ರಸ್ತೆಗಳಲ್ಲಿ ಅಡಿಗಡಿಗೂ ಗುಂಡಿಗಳಿವೆ, ನಮಗೆ ಯಾವ ಭಾಗ್ಯವೂ ಬೇಡ, ಗುಂಡಿ ಮುಚ್ಚುವ ಭಾಗ್ಯ ನೀಡಿ ಎಂದು ಹುಣಸೂರು ತಾಲ್ಲೂಕಿನ ಗ್ರಾಮಸ್ಥರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಹುಣಸೂರು ತಾಲ್ಲೂಕಿನ ಹಲವು ಗ್ರಾಮಗಳ ರಸ್ತೆ ಗುಂಡಿಗಳದ್ದೇ ಸಾಮ್ರಾಜ್ಯವಾಗಿದೆ. ತಾಲ್ಲೂಕಿನ ಉದ್ದೂರು, ಚಲ್ಲಹಳ್ಳಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಧ್ವಂಸವಾಗಿದೆ.
ಅತ್ತ ನನ್ನ ಕ್ಷೇತ್ರಕ್ಕೆ ಅನುದಾನ ನೀಡ್ತೀಲ್ಲ ಎಂದು ಸದನದಲ್ಲಿ ಶಾಸಕ ಜಿ ಡಿ ಹರೀಶ್ ಗೌಡ ಅಳಲು ತೋಡಿಕೊಳ್ಳುತ್ತಿದ್ದರೆ. ಇತ್ತ ಕ್ಷೇತ್ರದಲ್ಲಿ ಮಳೆ ನೀರಿನಿಂದ
ಗುಂಡಿ ಯಾವುದು, ರಸ್ತೆ ಯಾವುದು ಎಂದು ತಿಳಿಯದೆ ಸವಾರರ ಪರದಾಡುತ್ತಿದ್ದಾರೆ. ಆಸ್ಪತ್ರೆ ಪಾಲಾಗುತ್ತಿರುವ ಜನರ ಶಾಪಕ್ಕೆ ರಾಜಕಾರಣಿಗಳು ಗುರಿಯಾಗುತ್ತಿದ್ದಾರೆ.
ಮಳೆ ಬಂದರೆ ‘ಕೆರೆ’ಯಾಗುವ ರಸ್ತೆಗಳಲ್ಲಿ ಗುಂಡಿಗಳು ಕಾಣದೆ ನಡುರಸ್ತೆಯಲ್ಲೇ ಬೀಳುವ ವಾಹನ ಸವಾರರು, ಜನರ ಪ್ರಾಣಕ್ಕೆ ಸಂಚಕಾರ ಬಂದಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತಾ “ಸತ್ತ ಮೇಲೆ ಬರ್ತೀರಾ?” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಸ್ಯಾಂಕಿ ಕೆರೆ ಮುಂದೆ 800 ಕೆ.ಜಿ ಅಪ್ಪು ಕಂಚಿನ ಪ್ರತಿಮೆ ಅನಾವರಣ



















