ಬೆಂಗಳೂರು ಗ್ರಾಮಾಂತರ : ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ರೈತರ ಪರ ನಟ ಪ್ರಕಾಶ್ ರೈ ಹೋರಾಟಕ್ಕೆ ಇಳಿದಿರುವುದಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಬಿ. ಪಾಟೀಲ್ ಅವರು ಪ್ರಕಾಶ್ ರೈ ʼಕರ್ನಾಟಕದಲ್ಲಿ ಮಾತ್ರ ಪ್ರತಿಭಟನೆ ಮಾಡಿದರೆ ಸಾಕಾಗುವುದಿಲ್ಲ. ತಮಿಳುನಾಡು, ಆಂಧ್ರದಲ್ಲಿ ಹೋಗಿ ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಈ ವಿಷಯವಾಗಿ ನಟ ಹಾಗೂ ಹೋರಾಟಗಾರ ಪ್ರಕಾರ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಎಂ.ಬಿ. ಪಾಟೀಲ್ ವಿರುದ್ದ ವಿಡೀಯೋ ಮೂಲಕ ಕಿಡಿಕಾರಿರುವ ಪ್ರಕಾಶ್ ರಾಜ್, ʼನಮಸ್ಕಾರ ಪಾಟೀಲ್ ರೇ ಇದು ದೇವನಹಳ್ಳಿ ರೈತರ ಸಮಸ್ಯೆ, ಇಲ್ಲಿಯೇ ಹೋರಾಟ ಮಾಡಬೇಕು. ನಾವು ದೇಶದ ಹಲವು ಕಡೆ ಹೋರಾಟ ಮಾಡಿದ್ದೇವೆ. ತಮಿಳುನಾಡಿನ ರೈತರ ಪರ ದೆಹಲಿಯಲ್ಲಿ ಕುಳಿತವನು ನಾನೇ. ಪಂಜಾಬ್ ನ ರೈತರು ಹೋರಾಟ ಮಾಡ್ದಾಗಲು ನಿಂತವನು ನಾನೇ, ನಾವು ಎಲ್ಲದರು ಬಗ್ಗೆ ಮಾತನಾಡುತ್ತೇವೆ. ಗುಜಾರಾತ್ ನ ಮಹಾನ್ ಪ್ರಧಾನಿ ಗೆ ನಿಮಗಿಂತ ಹೆಚ್ಚು ಪ್ರಶ್ನೆ ಮಾಡುವವನು ನಾನೇ. ಆಯಾ ಹೋರಾಟಗಳನ್ನ ಅಲ್ಲಲ್ಲಿ ಮಾಡುತ್ತೇವೆ, ನಾವು ಯಾವ ಪಕ್ಷದವರಲ್ಲ ಜನರ ಪಕ್ಷದವರು ಎಂದು ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ದೇವನಹಳ್ಳಿ ರೈತರ ವಿಚಾರವಾಗಿ ನೀವು ಕಾನೂನು ರೀತಿ ಒಂದು ಪರಿಹಾರವನ್ನು ಹುಡುಕಿ. ಆಗದೇ ಹೋದಲ್ಲಿ ನಮ್ಮ ಬಳಿಯೇ ಬನ್ನಿ, ನಮ್ಮಲ್ಲಿ ನಿವೃತ್ತ ಜಸ್ಟಿಸ್ ಗೋಪಾಲಗೌಡರಿದ್ದರೇ. ಜನರಿಂದ ಆಯ್ಕೆಯಾದ ಪ್ರತಿನಿಧಿ ನೀವು, ಜವಬ್ದಾರಿಯಿಂದ ಮಾತನಾಡಿ ಅಂತಾ ಸಚಿವರ ವಿರುದ್ದ ಪ್ರಕಾಶ್ ರೈ ಕಿಡಿ ಕಾರಿದ್ದಾರೆ.
ಮಾತ್ರವಲ್ಲದೇ, ಇದೇ 15 ರಂದು ಸಿಗೋಣ ಮಾತನಾಡೋಣ, ಕೆಐಎಡಿಬಿ ಭೂ ಸ್ವಾದಿನ ಸಮಸ್ಯೆ ಬಗೆಹರಿಸಲು ನಿಟ್ಟಿನಲ್ಲಿ ಯೋಚನೆ ಮಾಡಿ ಎಂದು ಸಲಹೆ ನೀಡಿದ್ದಾರೆ.



















