ಮಂಡ್ಯ: ನಾನು ಕ್ಷೇತ್ರ ಬಿಟ್ಟು ಕೊಟ್ಟು ಪಕ್ಷ ಸೇರಿದ್ದೇನೆ. ನಮ್ಮದು ತ್ಯಾಗ ಮಾಡಿರುವ ಕುಟುಂಬ. ಆಸೆ ಪಡುವ ಕುಟುಂಬವಲ್ಲ ಎಂದು ಮಾಜಿ ಸಂಸದೆ ಸುಮಲತಾ (Sumalatha) ಹೇಳಿದ್ದಾರೆ.
ವಕ್ಫ್ (Waqf) ವಿರೋಧಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಾನಮಾನಕ್ಕಾಗಿ ನಾನು ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮೋದಿ ಸರ್ಕಾರದ (Modi Government) ಯೋಜನೆಯನ್ನ ಜನರಿಗೆ ತಲುಪಿಸುವ ಆಸೆ ಇದೆ. ಯಾವುದೇ ವೈಯಕ್ತಿಕ ಆಸೆ ನಮಗಿಲ್ಲ. ವೈಯಕ್ತಿಕ ಆಸೆಗಾಗಿ ರಾಜಕಾರಣ ಮಾಡುವವರ ಲೀಸ್ಟ್ ನಮ್ಮ ಮುಂದೆ ಇದೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷ ಸೇರಿರುವುದೇ ನನಗೆ ಸ್ಥಾನಮಾನ. ಮೋದಿ ಹಿಂದೆ ನಾವು ಇದ್ದೇವೆ, ಅವರ ಕೆಳಗೆ ಕೆಲಸ ಮಾಡ್ತಿರುವುದೇ ನಮಗೆ ಗೌರವ. ನಾನು ಮಂಡ್ಯದಿಂದ ಎಂಪಿ ಆಗಿದ್ದೆ. ಅಂಬರೀಶ್ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದರು. ಕೇಂದ್ರದಲ್ಲಿಯೂ ಮಂತ್ರಿಯಾಗಿದ್ದರು, ಎಲ್ಲವನ್ನೂ ನೋಡಿದ್ದೇವೆ. ಇದಕ್ಕಿಂತ ಇನ್ನೇನು ಸ್ಥಾನಮಾನ ಬೇಕು? ನಮ್ಮ ಕುಟುಂಬಕ್ಕೆ ಎಲ್ಲ ರೀತಿಯ ಅಧಿಕಾರಿಗಳು ಸಿಕ್ಕಿವೆ. ನಮಗೆ ಅಧಿಕಾರದ ಆಸೆ ಇಲ್ಲ ಎಂದು ಸ್ಥಾನಮಾನಕ್ಕಾಗಿ ಸುಮಲತಾ ಅವರು ಪ್ರತಿಭಟನೆಗೆ ಬಂದಿದ್ದಾರೆ ಎಂಬ ಚಲುವರಾಯ ಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.