ಬೆಂಗಳೂರು: ನೀವೇನಾದರೂ ದಕ್ಷಿಣ ಕನ್ನಡದವರಾಗಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಸಿದ್ದೀರಾ? ಹಾಗಾದರೆ, ನಿಮಗೆ ಒಳ್ಳೆಯ ಸುದ್ದಿ ಸಿಕ್ಕಿಸಿದೆ. ದಕ್ಷಿಣ ಕನ್ನಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿ ಸಹಾಯಕಿಯರು ಹಾಗೂ ಶಿಕ್ಷಕಿಯರ ಹುದ್ದೆಗಳ ನೇಮಕಾತಿಗಾಗಿ (WCD Dakshina Kannada Recruitment 2025) ಅಧಿಸೂಚನೆ ಹೊರಡಿಸಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ದಕ್ಷಿಣ ಕನ್ನಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಒಟ್ಟು ಹುದ್ದೆಗಳು: 277
ಉದ್ಯೋಗ ಸ್ಥಳ: ದಕ್ಷಿಣ ಕನ್ನಡ
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 10
ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. 19ರಿಂದ 35 ವರ್ಷದೊಳಗಿನ ಹೆಣ್ಣುಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. 56 ಅಂಗನವಾಡಿ ಸಹಾಯಕಿಯರು ಹಾಗೂ 221 ಶಿಕ್ಷಕಿಯರ ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ https://karnemakaone.kar.nic.in/ ವೆಬ್ ಸೈಟ್ ಗೆ ಭೇಟಿ ನೀಡಬೇಕು
ಅಂಗನವಾಡಿ ಸಹಾಯಕಿಯರು ಹಾಗೂ ಶಿಕ್ಷಕಿಯರ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು
ಅಧಿಸೂಚನೆಯನ್ನು ಓದಿಕೊಂಡು ಎಲ್ಲ ದಾಖಲೆ ಸಿದ್ಧಪಡಿಸಬೇಕು
ಆನ್ ಲೈನ್ ಅರ್ಜಿಯನ್ನು ಯಾವುದೇ ತಪ್ಪಿಲ್ಲದೆ ಭರ್ತಿ ಮಾಡಬೇಕು
ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು
ಫ್ಯೂಚರ್ ರೆಫರೆನ್ಸಿಗಾಗಿ ಅರ್ಜಿಯನ್ನು ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಬೇಕು