ವಯನಾಡ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ವಯನಾಡು ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ರೋಡ್ ಶೋ ನಡೆಸಿ ಮಾತನಾಡಿದರು. ನಾವು ಇಂದು ಅಧಿಕಾರದಲ್ಲಿದ್ದವರು ಹರಡುತ್ತಿರುವ ದ್ವೇಷ ಸಿದ್ಧಾಂತರ ಮದ್ಯೆ ಬದುಕುತ್ತಿದ್ದೇವೆ. ಇದು ಭಾರತೀಯ ರಾಜಕೀಯ ಅಡಿಪಾಯವಲ್ಲ. ಹೀಗಾಗಿ ಇದು ಭಾರತಕ್ಕೆ ವಿಚಿತ್ರ ಸಮಯವಾಗಿದೆ. ಪ್ರತಿ ದಿನ ದೇಶದಲ್ಲಿ ದ್ವೇಷದ ಸಿದ್ಧಾಂತರ ಹರಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಆಡಳಿತದಲ್ಲಿರುವ ಪಕ್ಷ ಪ್ರಜಾಪ್ರಭುತ್ವದ ಅಡಿಪಾಯವನ್ನೇ ತಲೆ ಕೆಳಗೆ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ, ನಾವು ಯಾವಾಗಲೂ ಸಮಾನತೆಗಾಗಿ ಹೋರಾಡುತ್ತಿದ್ದೇವೆ ಎಂದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಪ್ರಿಯಾಂಕಾ ಅವರನ್ನು ಸ್ವಾಗತಿಸಿದರು. ಪ್ರಿಯಾಂಕಾ ಅವರು ತಾಯಿಯೊಂದಿಗೆ ವಯನಾಡಿಗೆ ಆಗಮಿಸಿದ್ದರು.