ವಾರಾಣಾಸಿ : ಗಂಗೆಯ ತೀರದಲ್ಲಿ ಇಂದು ಇತಿಹಾಸ ನಿರ್ಮಾಣ! ಭಾರತದ ಮೊದಲ ಹೈಡ್ರೋಜನ್ ಚಾಲಿತ ಕ್ಲೀನ್ ವಾಟರ್ ಟ್ಯಾಕ್ಸಿ ಸೇವೆ ವಾರಾಣಸಿಯಲ್ಲಿ ಅಧಿಕೃತವಾಗಿ ಚಾಲನೆ ಪಡೆದಿದೆ. ಪರಿಸರ ಸ್ನೇಹಿ ತಂತ್ರಜ್ಞಾನ.. ಶೂನ್ಯ ಮಾಲಿನ್ಯ.. ಮತ್ತು ಗಂಗೆಯ ತಟ್ಟಲು ಹೊಸ ಯುಗ ಆರಂಭ. ಹೈಡ್ರೋಜನ್ ಫ್ಯುಯಲ್ ಸೆಲ್ ಬಳಸಿ ಓಡುವ ಈ ವಿಶೇಷ ಟ್ಯಾಕ್ಸಿ ಗಂಗೆಯಲ್ಲಿ ಸಂಚಾರದ ಸುಧಾರಣೆಗೂ, ಪ್ರವಾಸೋದ್ಯಮಕ್ಕೂ ದೊಡ್ಡ ಬದಲಾವಣೆ ತಂದಿದೆ.
ವಾರಾಣಸಿಯ ನಾಮೋ ಘಾಟ್‌ನಿಂದ ಗಂಗೆಯಲ್ಲೇ ಮೊದಲ ಬಾರಿಗೆ ಹೈಡ್ರೋಜನ್ ಚಾಲಿತ ವಾಟರ್ ಟ್ಯಾಕ್ಸಿಗೆ ಹಸಿರು ನಿಶಾನೆ ಸಿಕ್ಕಿದೆ. ದೇಶದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್ ಚಾಲಿತ ವಾಟರ್ ಟ್ಯಾಕ್ಸಿ ಸೇವೆಗೆ ವಾರಾಣಸಿಯಲ್ಲಿ ಚಾಲನೆ ದೊರೆತಿದೆ. ಈ ಮೂಲಕ ಶುದ್ಧ ಇಂಧನದಿಂದ ಚಲಿಸುವ ಜಲಸಾರಿಗೆ ಹೊಂದಿರುವ ಕೆಲವೇ ಕೆಲ ದೇಶಗಳ ಸಾಲಿಗೆ ಇದೀಗ ಭಾರತ ಸೇರ್ಪಡೆಯಾಗಿದೆ. ಚೀನಾ, ನಾರ್ವೆ, ನೆದರ್‌ಲ್ಯಾಂಡ್, ಜಪಾನ್ ದೇಶಗಳು ಈ ರೀತಿ ಹೈಡ್ರೋಜನ್ ಚಾಲಿತ ಹಡಗುಗಳನ್ನು ಹೊಂದಿವೆ.ಇದರೊಂದಿಗೆ ಈಗ ಭಾರತವೂ ಕೂಡ..
ಈ ಯೋಜನೆಯನ್ನ ಕೇಂದ್ರ ಜಲಮಾರ್ಗ ಮತ್ತು ಬಂದರು ಸಚಿವ ಸರ್ಬಾನಂದ ಸೊನೋವಾಲ್ ಉದ್ಘಾಟಿಸಿದರು… ಈ ಹಡಗು ರವಿದಾಸ್ ಘಾಟ್‌ನಿಂದ ನಮೋ ಘಾಟ್ ನಡುವೆ ಸಂಚರಿಸುತ್ತೇ.. ಇನ್ನೂ ಕೋಚ್ಚಿ ಶಿಪ್‌ಯಾರ್ಡ್ ನಿರ್ಮಿಸಿರುವ ಬೋಟು.. ಒಂದು ಫುಲ್ ಟ್ಯಾಂಕ್ ಹೈಡ್ರೋಜನ್‌ನಲ್ಲಿ 7–8 ಗಂಟೆಗಳ ನಿರಂತರ ಸೇವೆ ಇರಿವುದು ಒಂದು ದೊಡ್ಡ ತಾಂತ್ರಿಕ ಸಾಧನೆ.
ಹೈಡ್ರೋಜನ್ ಬೋಟು 50 ಪ್ರಯಾಣಿಕರನ್ನು ಒಂದೇ ಬಾರಿ ಕರೆದೊಯ್ಯುತ್ತದೆ. ಸಸ್ಯಾಹಾರಿ ತಿಂಡಿ-ತಿನಿಸು, ಸಿಸಿಟಿವಿ, ಬಯೋ ಟಾಯ್ಲೆಟ್ ನಂಥ ಸೌಲಭ್ಯವಿದೆಯಾವುದೇ ಸದ್ದಿಲ್ಲದೆ, ಹೊಗೆಯುಗುಳದೆ ಪರಿಸರ ಸ್ನೇಹಿಯಂತೆ ಕಾರ್ಯ ಈ ಎಲ್ಲಾ ಅನುಕೂಲಗಳು ಒಂದೇ ಬೋಟ್‌ನಲ್ಲಿ ಸಿಗೋದ್ರಿಂದ ಕೇಂದ್ರ ಸರ್ಕಾರದ ಸ್ವಚ್ಛ, ಹಸಿರು ಸಾರಿಗೆಗೆ ಉತ್ತೇಜನ ನೀಡುವ ಭಾಗವಾಗಿ ವಾಟರ್ ಟ್ಯಾಕ್ಸಿ ಸೇವೆಗೆ ಚಾಲನೆ ಸಿಕ್ಕಿದೆ.. ಅಲ್ಲದೇ ವಾರಾಣಸಿಗೆ ಬರುವ ದೇಶ-ವಿದೇಶ ಟೂರಿಸ್ಟ್‌ಗರಿಗೆ ಇದೊಂದು ಹೊಸ ಆಕರ್ಷಣೆಯಾಗಿದೆ.
ಇದನ್ನೂ ಓದಿ : ಕಾರಿನಲ್ಲಿ ಬಂದು ರಸ್ತೆ ಬದಿ ಕಸ ಸುರಿದವರಿಗೆ 5 ಸಾವಿರ ದಂಡ ಹಾಕಿದ GBA



















