ಬೆಂಗಳೂರು : ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಬೆಂಗಳೂರು ಜಲಮಂಡಳಿ ನೀರು ಬಳಕೆ ಶುಲ್ಕವನ್ನು ಏಪ್ರಿಲ್ ತಿಂಗಳಿನಿಂದ ಶೇ.3ರಷ್ಟು ದರhttps://en.wikipedia.org/wiki/3.5%25_rule ಹೆಚ್ಚಿಸಲು ತೀರ್ಮಾನಿಸಿತ್ತು. ಅಂತೆಯೇ ಇಂದಿನಿಂದ ನೀರಿನ ದರ ಶೇ.3ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ ವರ್ಷದಂತೆ ಆರ್ಥಿಕ ಸಮತೋಲನ ಸಾಧಿಸಲು ಈ ದರ ಪರಿಷ್ಕರಣೆ ಮಾಡಲಾಗಿದೆ.
ಈ ತಿಂಗಳ ಬಿಲ್‌ನಿಂದಲೇ ಹೊಸ ದರ ಅನ್ವಯವಾಗಲಿದ್ದು, ಬೆಂಗಳೂರು ನಿವಾಸಿಗಳಿಗೆ ಹೆಚ್ಚುವರಿ ಭಾರ ಬೀಳಲಿದೆ. ಗೃಹ ಬಳಕೆದಾರರಿಗೆ ಸರಾಸರಿ ತಿಂಗಳಿಗೆ 20ರಿಂದ 30 ರೂಪಾಯಿವರೆಗೆ ಹೆಚ್ಚುವರಿ ನೀರಿನ ಬಿಲ್ ಬರುವ ಸಾಧ್ಯತೆ ಇದೆ.
ಪರಿಷ್ಕೃತ ದರಗಳ ಪ್ರಕಾರ, ಗೃಹ ಬಳಕೆದಾರರಿಗೆ ಸ್ಲ್ಯಾಬ್ ಆಧಾರದ ಮೇಲೆ ಪ್ರತಿ ಲೀಟರ್‌ಗೆ 0.15 ಪೈಸೆಯಿಂದ 1 ಪೈಸೆವರೆಗೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್‌ಗೆ 1.90 ಪೈಸೆ ಹೆಚ್ಚಳ ನಿಗದಿಯಾಗಿದೆ.
ಇದಕ್ಕೂ ಮೊದಲು ಕಳೆದ ವರ್ಷವೂ ಇದೇ ರೀತಿಯಲ್ಲಿ ನೀರಿನ ಶುಲ್ಕವನ್ನು ಹೆಚ್ಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಶೇ.3ರಷ್ಟು ಏರಿಕೆ ಮಾಡಲಾಗಿದ್ದು, ಇದು ಏಪ್ರಿಲ್ ತಿಂಗಳಿನಿಂದಲೇ ಜಾರಿಗೆ ಬರುತ್ತಿದೆ.
ಇದನ್ನೂ ಓದಿ : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ವಾಯು ಗುಣಮಟ್ಟದಲ್ಲಿ ಸುಧಾರಣೆ


















