ಕನಕಪುರ : ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾತನಗುಡಿ ಸಮೀಪದ ಕನಕಪುರ ರಸ್ತೆಯಲ್ಲಿ ನಡೆಯುತ್ತಿದ್ದ ಜಲಮಂಡಳಿ ಪೈಪ್‌ಲೈನ್ ಕಾಮಗಾರಿಯಲ್ಲಿ ಭೀಕರ ದುರ್ಘಟನೆ ನಡೆದಿದೆ. 9ನೇ ತರಗತಿ ವಿದ್ಯಾರ್ಥಿ ಪ್ರೀತಂ(14) ಕೆಲಸ ನಡೆಯುತ್ತಿದ್ದ ಕಾಂಕ್ರೀಟ್ ಚೇಂಬರ್‌ಗೆ ಬಿದ್ದು ಮೃತಪಟ್ಟಿದ್ದಾನೆ.
ಪ್ರೀತಂ ಜನವರಿ 29ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಆರೋಪದಂತೆ ಎಫ್‌ಐಆರ್ ದಾಖಲಾಗಿತ್ತು. 3 ದಿನಗಳ ಹುಡುಕಾಟದ ಬಳಿಕ ಕಾಮಗಾರಿಗಳ ಸ್ಥಳದಲ್ಲಿ ತೇಲುತ್ತಿರುವ ಮೃತ ದೇಹವನ್ನು ಕಂಡು ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.
ಪ್ರೀತಂ ಮೃತದೇಹವನ್ನು ಆರ ಆರ್ ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಕೊಳ್ಳೆಗಾಲಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕುಟುಂಬಸ್ಥರು ಜಲಮಂಡಳಿ ಮತ್ತು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯಕ್ಕಾಗಿ ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಲೀಸ್ ವರದಿ ಪ್ರಕಾರ, 40 ಅಡಿ ಉದ್ದ, 12 ಅಡಿ ಅಗಲದ ಸಂಪ್‌ನಲ್ಲಿ ಪ್ರೀತಂ ಬಿದ್ದಿರುವುದು ತಿಳಿದಿದೆ. ಕುಟುಂಬಸ್ಥರಿಗೆ ಪ್ರೀತಂ ಮೃತದೇಹ ತಲುಪಿದ ಬಳಿಕ ಜಲಮಂಡಳಿ ಕೆಲಸಗಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : YSRCP ನಾಯಕ ಜೋಗಿ ರಮೇಶ್ ಮನೆಗೆ ದಾಳಿ | ಬೆಂಕಿ ಹಚ್ಚಿದ ಕಿಡಿಗೇಡಿಗಳು



















