ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ 3 ಹೊಸ ಮಾರ್ಗಗಳಿಗೆ ಬಸ್ ಸೇವೆ ಆರಂಭಿಸಿದೆ. ಈ ಹೊಸ ಮಾರ್ಗದಲ್ಲಿ ಸಂಚರಿಸುವ ಬಸ್ ಗಳು ನಗರದ ಎರಡು ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುತ್ತಿವೆ.
ಈ ಕುರಿತು ಬಿಎಂಟಿಸಿ ಪ್ರಕಟಣೆ ನೀಡಿದ್ದು, ” ಬಿಎಂಟಿಸಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ಜ. 23 ರಿಂದ ಪರಿಚಯಿಸುತ್ತಿದೆ. ಪ್ರಯಾಣಿಕರು ಈ ಸೇವೆ ಬಳಸಿಕೊಳ್ಳಬೇಕು ಎಂದು ಬಿಎಂಟಿಸಿ ಅಧಇಕಾರಿಗಳು ಸೂಚಿಸಿದ್ದಾರೆ.
ಹೊಸ ಮಾರ್ಗ 1
ಮಾರ್ಗ ಸಂಖ್ಯೆ – NICE-5EB
ಎಲ್ಲಿಂದ ಎಲ್ಲಿಗೆ – ಬಿಡದಿಯಿಂದ ಎಲೆಕ್ಟ್ರಾನಿಕ್ ಸಿಟಿ ನಡುವೆ.
ಬಸ್ಸುಗಳ ಸಂಖ್ಯೆ – 1
ಟ್ರಿಪ್ ಸಂಖ್ಯೆ – 2
ಬಿಡದಿ ಬಸ್ ನಿಲ್ದಾಣ ಬಿಡುವ ವೇಳೆ – ಬೆಳಿಗ್ಗೆ 8 ಗಂಟೆ ಎ
ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ಬಿಡುವ ವೇಳೆ – ಸಂಜೆ 6
ಸಂಚರಿಸುವ ಮಾರ್ಗ/ ನಿಲುಗಡೆ – ಕುಂಬಳಗೋಡು, ಅಂಚೇಪಾಳ್ಯ, ಬಸವನಗರ, ನೈಸ್ ರಸ್ತೆ, ಕೋನಪ್ಪನ ಅಗ್ರಹಾರ
ಹೊಸ ಮಾರ್ಗ 2
ಮಾರ್ಗ ಸಂಖ್ಯೆ – NICE-5K
ಎಲ್ಲಿಂದ ಎಲ್ಲಿಗೆ – ಕೆಂಗೇರಿ ಟಿಟಿಎಂಸಿ – ಎಲೆಕ್ಟ್ರಾನಿಕ್ಸ್ ಸಿಟಿ
ಬಸ್ಸುಗಳ ಸಂಖ್ಯೆ – 4
ಟ್ರಿಪ್ ಸಂಖ್ಯೆ – 32
ಕೆಂಗೇರಿ ಟಿಟಿಎಂಸಿ ನಿಲ್ದಾಣ ಬಿಡುವ ವೇಳೆ – ಬೆಳಿಗ್ಗೆ 07.15, 07.45, 08.15, 08.45, 09.45, 10.35, 11.05, 11.35, 12.50, ಮಧ್ಯಾಹ್ನ 1.20, 1.50, 2.20, 3.50, ಸಂಜೆ 4.20, 4.50, 5.20
ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ಬಿಡುವ ವೇಳೆ – ಬೆಳಿಗ್ಗೆ 08.30, 09.00, 09.30, 10.00, 11.15,11.45, ಮಧ್ಯಾಹ್ನ 12.15, 12.45, 2.00, 2.30, 3.00, 3.30, 5.00, 5.30, 6.00, 6.30
ಸಂಚರಿಸುವ ಮಾರ್ಗ/ ನಿಲುಗಡೆ – ನೈಸ್ ರಸ್ತೆ, ಕೋನಪ್ಪನ ಅಗ್ರಹಾರ.
ಹೊಸ ಮಾರ್ಗ 3
ಮಾರ್ಗ ಸಂಖ್ಯೆ – NICE-6E
ಎಲ್ಲಿಂದ ಎಲ್ಲಿಗೆ – ಬಸವೇಶ್ವರ ನಗರ – ಎಲೆಕ್ಟ್ರಾನಿಕ್ಸ್ ಸಿಟಿ
ಬಸ್ಸುಗಳ ಸಂಖ್ಯೆ – 1
ಟ್ರಿಪ್ ಸಂಖ್ಯೆ – 2
ಬಸವೇಶ್ವರನಗರ ನಿಲ್ದಾಣ ಬಿಡುವ ವೇಳೆ – ಬೆಳಿಗ್ಗೆ 07.30
ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ಬಿಡುವ ವೇಳೆ – ಸಂಜೆ 5.45
ಸಂಚರಿಸುವ ಮಾರ್ಗ/ ನಿಲುಗಡೆ -ಸುಮನಹಳ್ಳಿ, ಸುಂಕದಕಟ್ಟೆ, ಬ್ಯಾಡರಹಳ್ಳಿ, ಗೊಲ್ಲಹಳ್ಳಿ (ನೈಸ್ ರಸ್ತೆ ಮೂಲಕ) ಬಸ್ ಸೇವೆ ಆರಂಭಿಸಲಾಗಿದೆ.