ಬಿಬಿಎಂಪಿ ಚುನಾವಣೆ ನಡೆಸದ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿರುವ ಮಾಜಿ ಶಾಸಕ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್(Watal Nagaraj) ಪ್ರತಿಭಟನೆ ನಡೆಸಿದ್ದಾರೆ.
ಬಿಬಿಎಂಪಿ (BBMP) ಕೆಂದ್ರ ಕಚೇರಿ ಮುಂದೆ ಇಂದು ವಾಟಾಳ್ ಪ್ರತಿಭಟನೆ ನಡೆಸಿದ್ದಾರೆ. ಬಿಬಿಎಂಪಿಗೆ ಚುನಾವಣೆ ಇಲ್ಲದೆ 10 ವರ್ಷಗಳಾಗಿವೆ. ಇದರಿಂದಾಗಿ ಆಡಳಿತಯಂತ್ರ ಸಂಪೂರ್ಣ ಕುಸಿತವಾಗಿದೆ. ಸರ್ಕಾರಕ್ಕೆ ಬೆಂಗಳೂರಿನ ಅಭಿವೃದ್ಧಿ ಬೇಡವಾಗಿದೆ. ಹೀಗಾಗಿಯೇ ಬಿಬಿಎಂಪಿಗೆ ಚುನಾವಣೆ (election)ಘೋಷಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹೀಗಾಗಿ ಸರ್ಕಾರ ಕೂಡಲೇ ಬಿಬಿಎಂಪಿಗೆ ಚುನಾವಣೆ ಘೋಷಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ವಾಟಾಳ್ ಎಚ್ಚರಿಕೆ ನೀಡಿದ್ದಾರೆ.