ಹಾಸನ : ರಸ್ತೆ ಬದಿ ಜೇನು ತುಪ್ಪ ಖರೀದಿ ಮಾಡುವ ಗ್ರಾಹಕರೇ ಎಚ್ಚರದಿಂದಿರೀ. ಜೇನು ತುಪ್ಪ ಎಂದು ಹೇಳಿ ಸಕ್ಕರೆ ಪಾಕ ಮಾರಾಟ ಮಾಡುತ್ತಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದಿದೆ.

ಹೊರ ರಾಜ್ಯಗಳಿಂದ ಬಂದು ರಸ್ತೆ ಬದಿ ಒರಿಜಿನಲ್ ಎಂದು ನಕಲಿ ಜೇನು ಮಾರಾಟ ಮಾಡುತ್ತಿದ್ದಾರೆ. ಅದನ್ನು ನಿಜವೆಂದು ನಂಬಿ ಗ್ರಾಹಕರು ಖರೀದಿಸಿ ಮೋಸ ಹೋಗುತ್ತಿದ್ದಾರೆ. ಇದೀಗ ಕಲಬೆರಕೆ ಮಾಡುವಾಗ ಖದೀಮರು ಸಿಕ್ಕಿಬಿದ್ದಿದ್ದು, ಈ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಸದ್ಯ ಸ್ಥಳೀಯರ ಮಾಹಿತಿ ಮೇರೆಗೆ ಕಲಬೆರೆಕೆ ಮಾಡುತ್ತಿದ್ದವರನ್ನು ಹೊಳೆನರಸೀಪುರ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಬಿಕ್ಲು ಶಿವು ಹತ್ಯೆ ಕೇಸ್ | ಬಂಧನ ಭೀತಿಯಿಂದ ತಲೆಮರೆಸಿಕೊಂಡ ಬೈರತಿ ಬಸವರಾಜುಗೆ ಲುಕ್‌ಔಟ್ ನೋಟಿಸ್ ಸಾಧ್ಯತೆ



















