ಬೆಂಗಳೂರು: ರಿಕ್ಕ ರೈ ಮೇಲೆ ಶೂಟೌಟ್ ನಡೆದ ರಸ್ತೆ ಪಕ್ಕದ ಕಾಂಪೌಂಡ್ ಬಳಿ ಎರಡು ಗುಂಡು ಎಂಟಿ ಕಾಟೇಜ್ ಪತ್ತೆಯಾಗಿದ್ದು, ಪೊಲೀಸರಿಗೆ ಸಾಕಷ್ಟು ಅನುಮಾನ ಮೂಡಿಸುತ್ತಿದೆ.
ಅಲ್ಲದೇ, ಸ್ಥಳದಲ್ಲಿ ಒಂದು ಕೀ ಪ್ಯಾಡ್ ಮೊಬೈಲ್ ಹಾಗೂ ಗುಂಡಿನ ಎಂಟಿ ಕಾಟೇಜ್ ಪತ್ತೆಯಾಗಿದೆ. ಸದ್ಯ ಇವುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೈರಿಂಗ್ ಗೆ ಯಾವ ಗನ್? ಬಳಕೆ ಮಾಡಿದ್ದಾರೆಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳದಲ್ಲಿ ಸಿಕ್ಕ ಕೀ ಪ್ಯಾಡ್ ಮೊಬೈಲ್ ನಲ್ಲಿ ಯಾವುದೇ ಸಿಮ್ ಇರಲಿಲ್ಲ ಎನ್ನಲಾಗಿದೆ. ಶೂಟರ್ ಮೊದಲು ಡ್ರೈವರ್ ನನ್ನು ಟಾರ್ಗೆಟ್ ಮಾಡಿರಬಹುದು. ಆನಂತರ ರಿಕ್ಕಿ ಮೇಲೆ ಶೂಟರ್ ಶೂಟ್ ಮಾಡಲು ಮುಂದಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಮಾಫಿಯಾದ ಹಿನ್ನೆಲೆಯಲ್ಲಿ ಕೂಡ ಫೈರಿಂಗ್? ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಲ್ಯಾಂಡ್ ವಿಚಾರದಲ್ಲಿ ರಿಕ್ಕಿ ರೈ ಕೆಲವರ ಜೊತೆ ವೈಮನಸ್ಸು ಹೊಂದಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಫೈರಿಂಗ್ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಫೈರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಬಸವರಾಜು ದೂರು ಸಲ್ಲಿಸಿದ್ದಾರೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಮೂರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ರಿಕ್ಕಿ ರೈ ನ ಮೊದಲ ಪತ್ನಿ ಅನ್ನಪೂರ್ಣ, ರಾಕೇಶ್ ಮಲ್ಲಿ ಹಾಗೂ ನಿತೇಶ್ ಎಸ್ಟೇಟ್ ಕಂಪನಿ ಎಂಬುವವರ ವಿರುದ್ಧ ದೂರು ದಾಖಲಾಗಿದೆ.



















