ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಪೊಲೀಸರು ಕೋರ್ಟ್ ಗೆ ಸಲ್ಲಿಸಿರುವ ರಿಮ್ಯಾಂಡ್ ಕಾಪಿಯಲ್ಲಿ ಕೊಲೆಗೆ ಕಾರಣವಾಗಿರುವ ಹಲವು ಅಂಶಗಳನ್ನು ಸೇರಿಸಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಆಘಾತ ಹಾಗೂ ಮೆದುಳಿನ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ರೇಣುಕಾಸ್ವಾಮಿ ದೇಹದ 32 ಕಡೆ ಗಾಯದ ಗುರುತುಗಳು ಪತ್ತೆಯಾಗಿವೆ. ತಲೆ ಬುರುಡೆಯಲ್ಲಿ 7ಕ್ಕೂ ಅಧಿಕ ಗಾಯದ ಗುರುತುಗಳಿವೆ. ಮರ್ಮಾಂಗದಲ್ಲಿ ತೀವ್ರ ರಕ್ತಸ್ರಾವವಾಗಿರುವ ಕುರಿತು ಪೋಸ್ಟ್ ಮಾರ್ಟಂನಲ್ಲಿ ಬಹಿರಂಗವಾಗಿದೆ.
ಕೃತ್ಯಕ್ಕೆ ಬಳಸಿದ್ದ ಲಾಠಿ, ರಿಪೀಸ್ ಪಟ್ಟಿ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಕ್ತದ ಕಲೆಗಳು ಕೂಡ ಪತ್ತೆಯಾಗಿವೆ ಎನ್ನಲಾಗಿದೆ. ಆದರೂ ಇದು ಭಯಾನಕ ಕೊಲೆ ಎಂಬುವುದು ಬಹಿರಂಗವಾಗುತ್ತಿದೆ.