ಕೊಪ್ಪಳ: ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಹಿನ್ನೆಲೆ ದೇಶಾದ್ಯಂತ ಎನ್‌ರ್ಜಿ ಬೆಲೆಗಳು ಮತ್ತು ಸರಬರಾಜು ಮೇಲೆ ಪ್ರಭಾವ ಬೀರಿದೆ. ಇದೇ ಪರಿಣಾಮದಿಂದ ಕೊಪ್ಪಳದಲ್ಲಿನ ಎರಡು ಆಟೋ ಗ್ಯಾಸ್ ಬಂಕ್‌ಗಳು ಕಳೆದ ಹದಿನೈದು ದಿನಗಳಿಂದ ಬಂದ್ ಆಗಿವೆ.
ಬಂಕ್ ಬಂದ್ ಆಗಿರುವ ಹಿನ್ನೆಲೆಯಲ್ಲಿ, ಆಟೋ ಚಾಲಕರು ಗ್ಯಾಸಿಗಾಗಿ ಪರದಾಡುತ್ತಿದ್ದಾರೆ. ಗ್ಯಾಸ್ ಲಭ್ಯವಿಲ್ಲದ ಕಾರಣ, ಕೆಲವರು ತಮ್ಮ ಆಟೋಗಳನ್ನು ನಿಲ್ಲಿಸುವ ಸ್ಥಿತಿಯಲ್ಲಿದ್ದಾರೆ. ಇದರಿಂದ ಆಟೋ ಓಡಿಸಿ ಜೀವನ ನಡೆಸುತ್ತಿರುವವರಿಗೆ ತೀವ್ರ ಸಂಕಷ್ಟಗಳು ಎದುರಾಗಿದೆ.
ಚಾಲಕರು ಹಾಗೂ ಬಂಕ್ ಮಾಲೀಕರು ಇಂದು ಅಥವಾ ನಾಳೆ ಗ್ಯಾಸ್ ಬರುತ್ತದೆ ಎಂದು ಹೇಳಿ ನಿರೀಕ್ಷೆಯಲ್ಲಿ ಇದ್ದರೂ, ಯಾವುದೇ ದೃಢ ಪರಿಹಾರ ಸಿಗದಿರುವುದರಿಂದ ಅವರು ಅಲೆದಾಡುತ್ತಿದ್ದಾರೆ. ಗ್ಯಾಸ್ ಬಂಕ್ ಸಿಬ್ಬಂದಿಗೂ ಕೆಲಸ ಮಾಡುವ ಅವಕಾಶ ಇಲ್ಲದಂತೆ ತಿರುಗಿದೆ. ಸ್ಥಳೀಯ ಬಂಕ್ ಮ್ಯಾನೇಜರ್‌ಗಳು ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಆಟೋ ಗ್ಯಾಸ್ ಸರಬರಾಜಿಗಾಗಿ ತಕ್ಷಣ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ವಾರ್ ಎಫೆಕ್ಟ್ : LPG ಕೊರತೆ – ರಾಜಧಾನಿಯಲ್ಲಿ ಹೋಟೆಲ್ ಮಾರಾಟಕ್ಕೆ ಮುಂದಾದ ಮಾಲೀಕರು



















