ಕಲಬುರಗಿ : ವಕ್ಫ್ ಆಸ್ತಿ ವಿಚಾರದಲ್ಲಿ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವುದಾಗಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟವಾದ ಆದೇಶ ನೀಡಿದ್ದಾರೆ. ರೈತರ ಜಮೀನನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುತ್ತಿಲ್ಲ. ಅವರು ನಮ್ಮ ಅನ್ನದಾತರು. ಅವರ ಜಮೀನು ತೆಗೆದುಕೊಳ್ಳಲು ನಾವ್ಯಾರು ಎಂದಿದ್ದಾರೆ.
ಬಿಜೆಪಿ ವಕ್ಫ್ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಇದರಿಂದ ಬಿಜೆಪಿಗೆ ಯಾವುದೇ ಲಾಭ ಆಗುವುದಿಲ್ಲ. ಜನರಿಗೆ ಬಿಜೆಪಿ ಹೇಳುತ್ತಿರುವುದು ಅರ್ಥವೇ ಆಗುತ್ತಿಲ್ಲ. ವಕ್ಫ್ ಇವತ್ತಿನದಲ್ಲ. ಸ್ವಾತಂತ್ರ್ಯ ಬರುವ ಮುಂಚೆಯಿಂದಲೂ ವಕ್ಫ್ ಇದೆ. ವಕ್ಫ್ ಬಳಿ ಇರುವುದು ಸರ್ಕಾರ ನೀಡಿರುವ ಜಮೀನಲ್ಲ. ದಾನಿಗಳು ಕೊಟ್ಟಿರುವ ಜಮೀನದು. ಕೇಂದ್ರ ಸರಕಾರ ವಕ್ಫ್ ಕಾಯಿದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ. ಅದಕ್ಕಾಗಿಯೇ ಇಷ್ಟೆಲ್ಲ ಮಾಡುತ್ತಿದ್ದಾರೆ ಎಂದಿದ್ದಾರೆ.
ಉಪ ಚುನಾವಣೆ ಕುರಿತು ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿಯನ್ನು ಜನರೇ ಸೋಲಿಸುತ್ತಾರೆ. ಕುಮಾರಸ್ವಾಮಿ ಮತದಾರರ ಅಭಿಪ್ರಾಯ ಕೇಳದೆ ಪಾರ್ಲಿಮೆಂಟ್ಗೆ ಹೋಗಿದ್ದಾರೆ. ಹೀಗಾಗಿ ಚನ್ನಪಟ್ಟಣದ ಜನ ಈಗ ಬದಲಾವಣೆ ಬಯಸುತ್ತಿದ್ದಾರೆ. ಸಿ.ಪಿ.ಯೋಗೇಶ್ವರ್ ಆ ತಾಲೂಕಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಆದ್ದರಿಂದ ಯೋಗೇಶ್ವರ್ ಗೆಲುವು ನಿಶ್ಚಿತ ಎಂದಿದ್ದಾರೆ.