ಯಾದಗಿರಿ: ನೋಟಿಸ್ ನೀಡಿರುವ ಆಸ್ತಿಗಳೆಲ್ಲ ವಕ್ಫ್ ಆಸ್ತಿ ಎಂದು ಹೇಳಲು ಯಾವುದೇ ಆಧಾರ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಅವರು, ಇದು ವಕ್ಫ್ ಆಸ್ತಿ ಎಂದು ಹೇಳಲು ಯಾವುದೇ ಪುರಾವೆ ಇಲ್ಲ. ಜಮೀರ್ ನ ಅಪ್ಪನ ಆಸ್ತಿಯಲ್ಲ. ನಿಜಾಮರು ಯಾವುದಾದ್ರೂ ಬರೆದುಕೊಟ್ಟ ತಾಮ್ರದ ತಗಡು ಇದೆಯಾ.?, ಯಾವುದೇ ರೈತ ತಮ್ಮ ಜಮೀನು, ದೇವಸ್ಥಾನ ಉಳಿಸಿಕೊಳ್ಳಲು ಹೈಕೋರ್ಟ್‌ಗೆ ಹೋಗಬೇಕು, ಇದು ವಕ್ಫ್ ಆಸ್ತಿ ಅಲ್ಲ ಎನ್ನುವುದು ನಮ್ಮ ಬೇಡಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಒಂದು ತಂಡವಾಗಿ ಜಮೀನು ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್‌ನವರಿಗೆ, ಮಮತಾ ಬ್ಯಾನರ್ಜಿ ಅವರಿಗೆ ವಕ್ಫ್ ಒಂದು ಕರಾಳ ಎಂಬುವುದನ್ನು ತೋರಿಸಿ ಕೊಡಲು ಹೋರಾಟ ನಡೆಸುತ್ತಿದ್ದೇವೆ. ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದ ಗೌಡ ಯಾವುದೇ ಸರ್ಕಾರ ಇರಲಿ ನಾವು ಸಮರ್ಥನೆ ಮಾಡಲು ಬಂದಿಲ್ಲ, ವಕ್ಫ್ ಬಗ್ಗೆ ಸಮಸ್ಯೆ ಆಲಿಸಲು ಬಂದಿದ್ದೇವೆ. ಯಾರೇ ಇದ್ದಾಗ ನೋಟಿಸ್ ಬಂದರೂ ಅದು ತಪ್ಪು. ಅದು ಸರಿಯಾಗಬೇಕು. ವಕ್ಫ್ ಬಂದಾಗಬೇಕು ಎಂಬುವುದು ಮಾತ್ರ ನಮ್ಮ ಹೋರಾಟದ ಉದ್ಧೇಶ ಹಾಗೂ ಬೇಡಿಕಿ ಎಂದಿದ್ದಾರೆ.