ಚಿಕ್ಕಮಗಳೂರು : ಪವಿತ್ರ ಮುಳ್ಳಯ್ಯನಗಿರಿ ಕ್ಷೇತ್ರದಲ್ಲಿ ಪ್ರವಾಸಿಗರು ಚಪ್ಪಲಿ ಧರಿಸಿ ಮುಳ್ಳಪ್ಪ ಸ್ವಾಮಿ ಗದ್ದುಗೆ ಮೇಲೆ ಓಡಾಡಿದರೆಂದು ಪ್ರವಾಸಿಗರ ವಿರುದ್ಧ ಭಜರಂಗದಳ ಮತ್ತು ವಿಹೆಚ್ಪಿ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಪ್ರವಾಸಿಗರಿಂದ ಅಪವಿತ್ರ ಗೊಳಿಸುತ್ತಿರುವುದಕ್ಕೆ ಸಂಘಟನೆಯು ಕಿಡಿಕಾರಿದ್ದು, ಅಪವಿತ್ರ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿಯಲ್ಲಿನ ದೇವರಾಗಿರುವ ಮುಳ್ಳಪ್ಪ ಸ್ವಾಮಿಯನ್ನು ಸುತ್ತಮುತ್ತಲಿನ ನೂರಾರು ಊರಿನ ಜನರು ಆರಾಧನೆ ಮಾಡುತ್ತಾರೆ. ಶಿಖರದ ತುತ್ತ ತುದಿಯಲ್ಲಿರುವ ಮುಳ್ಳಪ್ಪ ಸ್ವಾಮಿ ಗದ್ದುಗೆ ಮೇಲೆ ಶೂ, ಚಪ್ಪಲಿ ಹಾಕಿ ಓಡಾಟ ಮಾಡುತ್ತಿರುವ ಪ್ರವಾಸಿಗರ ವಿಡಿಯೋ ವೈರಲಾಗಿದ್ದು, ಇವರ ವಿರುದ್ಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಘಟನೆಗಳು ಮನವಿ ಪತ್ರ ಸಲ್ಲಿಸಿದೆ.
ಈ ಘಟನೆಯು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಚಾ.ನಗರ | ತಾಯಿ ಹುಲಿ ಜೊತೆ ನಾಲ್ಕು ಮರಿ ಹುಲಿ ಪ್ರತ್ಯಕ್ಷ ಪ್ರಕರಣ ; ಮತ್ತೊಂದು ಮರಿ ಸೆರೆ



















