ಬೆಂಗಳೂರಿನ ಐಸ್ ಕ್ರೀಂ ಪಾರ್ಲರ್ ವೊಂದರಲ್ಲಿ ಕಿಡಿಗೇಡಿಗಳು ಗೂಂಡಾವರ್ತನೆ ತೋರಿರುವ ಘಟನೆಯೊಂದು ನಡೆದಿದೆ.
ಪ್ರತಿಷ್ಠಿತ ಐಸ್ ಕ್ರೀಂ ಪಾರ್ಲರ್ ಬಳಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಶಾಪ್ ಕ್ಲೋಸಿಂಗ್ ಟೈಮ್ ನಲ್ಲಿ ಡೈನಿಂಗ್ ಬದಲಾಗಿ ಪಾರ್ಸೆಲ್ ಕೊಡ್ತೀವಿ ಅಂದಿದಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯನಗರ ಎಂ.ಸಿ ಲೇಔಟ್ ಬಳಿ ಇರುವ ಪ್ರತಿಷ್ಠಿತ ಐಸ್ ಕ್ರೀಂ ಪಾರ್ಲರ್ನಲ್ಲಿ ಮಧ್ಯಾಹ್ನ 12:50 ರ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 12:50 ರ ಸುಮಾರಿಗೆ ಶಾಪ್ ಬಳಿ ಕಿಡಿಗೇಡಿಗಳು ಹೋಗಿದ್ದಾರೆ.
ಆದರೆ, ಮಧ್ಯಾಹ್ನ 1 ಗಂಟೆಗೆ ಶಾಪ್ ಕ್ಲೋಸ್ ಮಾಡಲು ಸಿಬ್ಬಂದಿ ತಯಾರಿ ನಡೆಸಿದ್ದರು. ಆ ವೇಳೆ ಅಲ್ಲೇ ಕೂತು ತಿನ್ನುತ್ತೇವೆಂದು ಕಿಡಿಗೇಡಿಗಳು ಹೇಳಿದ್ದಾರೆ. ಇದಕ್ಕೆ ಸಿಬ್ಬಂದಿಗೆ ಒಪ್ಪಿಗೆ ನೀಡಿಲ್ಲ. ಕ್ಲೋಸಿಂಗ್ ಸಮಯವಾಗಿದ್ದರಿಂದ ಪಾರ್ಸೆಲ್ ನೀಡುವುದಾಗಿ ಹೇಳಿದ್ದಾರೆ. ಆ ವೇಳೆ ಶಾಪ್ ನ ಕಂಪ್ಯೂಟರ್ ಸಿಸ್ಟಮ್ ತಳ್ಳಿ ಕಿಡಿಗೇಡಿಗಳು ಅವಾಜ್ ಹಾಕಿದ್ದಾರೆ.
ಕೌಂಟರ್ ನಲ್ಲಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಯ ದೃಶ್ಯಾವಳಿ ಶಾಪ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.