ಮುಂಬಯಿ: ನಾಳೆ ಮಹಾರಾಷ್ಟ್ರ ವಿಧಾನಸಭೆಯ (Maharashtra Elections) ಎಲ್ಲಾ 288 ಕ್ಷೇತ್ರಗಳು ಹಾಗೂ ಜಾರ್ಖಂಡ್ ನ ಅಂತಿಮ ಹಂತದಲ್ಲಿ 38 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ-ಮಹಾಯುತಿ ಮೈತ್ರಿಕೂಟಗಳ ಮಧ್ಯೆ ನೇರ ಫೈಟ್ ನಡೆದಿದೆ. ಜಾರ್ಖಂಡ್ ನಲ್ಲೂ ಕೂಡ ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಫೈಟ್ ಇದೆ. ಈಗಾಗಲೇ ಎಲ್ಲೆಡೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ನಾಳೆ ರಜೆ ಘೋಷಿಸಲಾಗಿದೆ.
ಈಗಾಗಲೇ ಆರೋಪ್- ಪ್ರತ್ಯಾರೋಪಗಳ ಸುರಿಮಳೆಯಾಗಿದೆ. ಬಿಜೆಪಿ ನೇತೃತ್ವದ ನಾಯಕರು ಕಾಂಗ್ರೆಸ್ ನೇತೃತ್ವದ ನಾಯಕರು ಪರಸ್ಪರ ವಾಗ್ವಾದ ನಡೆಸಿದ್ದಾರೆ. ನಾಳೆ ಮತದಾರ ಹಣೆಬರಹ ಬರೆಯಲಿದ್ದಾನೆ.