ರಾಮನಗರ: ಚನ್ನಪಟ್ಟಣದ ಮತದಾರರು ತುಂಬಾ ಪ್ರಬುದ್ಧರು. ಅವರು ಯಾವುದೇ ಹಣದ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕ್ಷೇತ್ರದಲ್ಲಿ ಕೃತಕ ಹವಾ ಸೃಷ್ಟಿ ಮಾಡಲು ಮುಂದಾಗಿದೆ. ಜಿಲ್ಲೆ ಹಾಗೂ ರಾಜ್ಯದಿಂದ ಕಾರ್ಯಕರ್ತರನ್ನು ಕರೆಯಿಸಿ ಕೃತಕ ಹವಾ ಸೃಷ್ಟಿ ಮಾಡಲು ಹೊರಟಿದೆ. ಆದರೆ, ಕಾಂಗ್ರೆಸ್ ನ ಸಮಾವೇಶ ಕೇವಲ ನಮ್ಮ ಚನ್ನಪಟ್ಟಣಕ್ಕೆ ಮಾತ್ರ ಸೀಮಿತವಾಗಿದೆ. ಚನ್ನಪಟ್ಟಣದ ಮತದಾರರು ಮಾತ್ರ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಅಲ್ಲದೇ, ಈ ಕಾಂಗ್ರೆಸ್ ಆಯೋಜಿಸಿರುವ ಬಹಿರಂಗ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ನಾವು ಬೇರೆ ಎಲ್ಲಿಂದಲೂ ಜೆಡಿಎಸ್ ನಂತೆ ಜನರನ್ನು ಕೂಡಿಸುತ್ತಿಲ್ಲ ಎಂದಿದ್ದಾರೆ.