ಮೈಸೂರು: ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳಲ್ಲಿ ಒಕ್ಕಲಿಗ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.
ಜಿ.ವಿ.ಸೀತಾರಾಮ್ ಅವರು ಒಕ್ಕಲಿಗರ ವಿರುದ್ಧ ಹೇಳಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದ್ದು, ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಸೀತರಾಮ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಜಿ.ವಿ.ಸೀತಾರಾಮ್, ಬೋವಿ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಪರಮಾಪ್ತ ಎಂದು ಹೇಳಲಾಗುತ್ತಿದೆ.
ಎಫ್‌ಐ ಆರ್ ದಾಖಲಾದ ಬಳಿಕ ಸೀತಾರಾಮ್ ನಾಪತ್ತೆಯಾಗಿದ್ದು, ಎರಡೂ ತಾಲೂಕಿನ ಹಳ್ಳಿಗಳಲ್ಲಿ ಆಟೋ, ಜೀಪ್ ಗಳ ಮೂಲಕ ಅನೌನ್ಸ್ ಮಾಡಿ ಆತನನ್ನು ಗಡಿಪಾರು ಮಾಡುವಂತೆ ಒಕ್ಕಲಿಗ ಮುಖಂಡರು ಆಗ್ರಹಿಸಿದ್ದಾರೆ.



















