ಬೆಂಗಳೂರು: ಇಂದಿನಿಂದ ಐಪಿಎಲ್ ಹಂಗಾಮಾ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ತಂಡ ಭರ್ಜರಿ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಹಾನೆ ಪಡೆ 174 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಆರ್ ಸಿಬಿ ತಂಡ ಭರ್ಜರಿ ಜಯ ದಾಖಲಿಸಿದೆ. ಆರ್ ಸಿಬಿಗೆ ಉತ್ತಮ ಆರಂಭ ಸಿಕ್ಕಿದ್ದು, ಕಿಂಗ್ ಕೊಹ್ಲಿ ಕೊನೆಯವರೆಗೂ ಪಿಚ್ ಕಚ್ಚಿ ನಿಂತು ಜಯ ತಂದು ಕೊಟ್ಟಿದ್ದಾರೆ. ಆರಂಭಿಕರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ಫಿಲ್ ಸಾಲ್ಟ್ (Phil Salt) ಮೊದಲ 6 ಓವರ್ಗಳಲ್ಲೇ ತಂಡದ ಮೊತ್ತವನ್ನು 80 ರನ್ ಗಳವರೆಗೆ ತಂದು ನಿಲ್ಲಿಸಿದ್ದರು.
ಆರ್ ಸಿಬಿಗೆ ಮೊದಲ ಓವರ್ ನಿಂದಲೇ ತನ್ನ ಆರ್ಭಟ ಮುಂದುವರೆಸಿತು. ಓವರ್ನಲ್ಲಿ ಫಿಲ್ ಸಾಲ್ಟ್ 1 ಬೌಂಡರಿ ಹೊಡೆದರೆ, ವಿರಾಟ್ ಕೊಹ್ಲಿ ಕೂಡ ಬೌಂಡರಿಯೊಂದಿಗೆ ಖಾತೆ ತೆರೆದರು. ಹೀಗಾಗಿ ಮೊದಲ ಓವರ್ ನಲ್ಲಿ 12 ರನ್ ಗಳು ಹರಿದು ಬಂದವು.
ನಂತರ ಮೂರನೇ ಓವರ್ ನಲ್ಲಿ ವರುಣ್ ಚಕ್ರವರ್ತಿ 21 ರನ್ ಬಿಟ್ಟು ಕೊಟ್ಟರು. ಆಗಿನಿಂದ ಆರ್ ಸಿಬಿಯ ಆರ್ಭಟ ತೆಡಯಲು ಕೆಕೆಆರ್ ಗೆ ಆಗಲಿಲ್ಲ. ಆರ್ ಸಿಬಿ ಪರ ಫಿಲ್ ಸಾಲ್ಟ್ 56, ವಿರಾಟ್ ಕೊಹ್ಲಿ ಔಟ್ ಆಗದೆ 59, ದೇವದತ್ತ ಪಡಿಕ್ಕಲ್ 10, ನಾಯಕ ರಜತ್ ಪಾಟಿದಾರ್ 36, ಲೈಮ್ ಲಿವಿಂಗ್ ಸ್ಟೋನ್ ಅಜೇಯ 15 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.