ಬೆಂಗಳೂರು: ಟಾಲಿವುಡ್‌ನ ನಿತಿನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಬಿನ್ ಹುಡ್ ಸಿನಿಮಾ ಬಿಡುಗಡೆಯ ಸನಿಹ ಬಂದಿದೆ. ಮಾರ್ಚ್ 28ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದ್ದು, ಪ್ರಚಾರದ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದೆ ಚಿತ್ರತಂಡ. ಈ ನಡುವೆ ಇದೇ ತೆಲುಗು ಚಿತ್ರವನ್ನು ಕರ್ನಾಟಕದಲ್ಲಿ ವಿಕೆ ಫಿಲಂಸ್ ವಿತರಣೆಯ ಜವಾಬ್ದಾರಿ ಹೊತ್ತಿದೆ.

ವೆಂಕಿ ಕುಡುಮುಲ ನಿರ್ದೇಶಿಸಿರುವ ರಾಬಿನ್ ಹುಡ್ ಸಿನಿಮಾದಲ್ಲಿ ನಿತಿನ್‌ಗೆ ಜೋಡಿಯಾಗಿ ಕನ್ನಡತಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ರಾಜೇಂದ್ರ ಪ್ರಸಾದ್, ವೆನ್ನೆಲಾ ಕಿಶೋರ್ ಮತ್ತು ಬ್ರಹ್ಮಾಜಿ ಸೇರಿದಂತೆ ಘಟಾನುಘಟಿ ಪೋಷಕ ಪಾತ್ರಧಾರಿಗಳು ಚಿತ್ರದಲ್ಲಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಾಯಿ ಶ್ರೀರಾಮ್ ಛಾಯಾಗ್ರಹಣ ಮತ್ತು ಪ್ರವೀಣ್ ಪುಡಿ ಅವರ ಸಂಕಲನ ಚಿತ್ರಕ್ಕಿದೆ.

ಇದೇ ಮಾರ್ಚ್ 28ರಂದು ರಾಬಿನ್ ಹುಡ್ ಸಿನಿಮಾ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿಕೆ ಫಿಲಂಸ್ ಡಿಸ್ಟ್ರಿಬ್ಯೂಷನ್ ಸಂಸ್ಥೆ ವತಿಯಿಂದ 120+ ಪರದೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ಕರ್ನಾಟಕದ ಸಿನಿಮಾ ಕ್ಷೇತ್ರದಲ್ಲಿ ವೇಗವಾಗಿ ಮುಂದೆ ಸಾಗುತ್ತಿರುವ ವಿಕೆ ಫಿಲಂಸ್, ಇದೀಗ ರಾಬಿನ್ ಹುಡ್ ಸಿನಿಮಾ ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದೆ ಬಂದಿದೆ. ಈ ತಿಂಗಳ ಆರಂಭದಲ್ಲಿ ಸಬ್ದಾ, ಕಿಸ್ ಕಿಸ್ ಕಿಸ್ಸಾಕ್ ಮತ್ತು ಸಲಾರ್ ಸಿನಿಮಾಗಳ ವಿತರಣೆ ಬಳಿಕ, ತೆಲುಗಿನ ಬಹುನಿರೀಕ್ಷಿತ ಸಿನಿಮಾದ ವಿತರಣೆ ಪಡೆದಿದೆ ವಿಕೆ ಫಿಲಂಸ್.