ಬೆಂಗಳೂರು : ವಿಷ್ಣುವರ್ಧನ್ ಸಮಾಧಿ ನೆಲಸಮ ಹಿನ್ನಲೆ, ನಟ ಅನಿರುದ್ಧ ಮುಂದಿನ ನಡೆಯ ಬಗ್ಗೆ ಚರ್ಚಿಸಲು ವಿಷ್ಣು ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.
ಅನಿರುದ್ದ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ವೀಡಿಯೋ ಪೋಸ್ಟ್ ನಲ್ಲಿ ಆಹ್ವಾನಿಸಿದ್ದು, ಆ. 17ರಂದು ಜಯನಗರದ ವಿಷ್ಣು ಮನೆಗೆ ಅಭಿಮಾನಿಗಳಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಆಹ್ವಾನ ನೀಡಲಾಗಿದ್ದು, “ಆರೋಗ್ಯಕರ ಚರ್ಚೆಗೆ ಮಾತ್ರ ಅವಕಾಶ ನೀಡಲಾಗಿದೆ. ಗಲಾಟೆ ಮಾಡುವ ಅಭಿಮಾನಿಗಳು ಬರಲೇಬೇಡಿ” ಎಂದು ಹೇಳಿದ್ದಾರೆ.
ವಿಷ್ಣು ಅಪ್ಪನ ಹೆಸರು ಹೇಳಿಕೊಂಡು ಅನೇಕರು ಹೆಸರು ಮಾಡಿಕೊಳ್ಳುತ್ತಿದ್ದಾರೆ. ವಿಷ್ಣು ಅಭಿಮಾನಿ ಎಂಬ ಹೆಸರಲ್ಲಿ, ನಮ್ಮ ಜೊತೆ ಇದ್ದು ನಮಗೆ ಕೇಡನ್ನು ಬಯಸುತ್ತಿದ್ದಾರೆ. ಅಭಿಮಾನಿ ಎನ್ನುವ ಮುಖವಾಡ, ವೇಷ ಧರಿಸಿರುವವರ ಮಧ್ಯೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.