ಉದಯಪುರ : ರಾಜಸ್ಥಾನದ ಸುಂದರ ನಗರ ಉದಯಪುರದಲ್ಲಿ ಇಂದು ‘ವಿರೋಶ್’ ಜೋಡಿಯ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಯಿತು. ಮದುವೆ ಪೂರ್ವ ಹಳದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಕುಟುಂಬಸ್ಥರು ಹಾಗೂ ಆಪ್ತರು ಭಾಗಿಯಾಗಿದ್ದರು.

ಹಳದಿ ಸಂಭ್ರಮದಲ್ಲಿ ನಟಿ ಆಶಿಕಾ ರಂಗನಾಥ್ ಭಾಗಿಯಾಗಿ ಸಂಭ್ರಮ ಹೆಚ್ಚಿಸಿದರು. ಕಾರ್ಯಕ್ರಮದ ವಿಶೇಷ ಕ್ಷಣಗಳನ್ನು ಆಶಿಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಳದಿ ಉಡುಪಿನಲ್ಲಿ ಮಿಂಚಿದ ತಾರೆಗಳ ಫೋಟೋಗಳು ಈಗ ವೈರಲ್ ಆಗಿವೆ.

ಮೂಲಗಳ ಪ್ರಕಾರ ಕನ್ನಡ ಚಿತ್ರರಂಗದ ಸುಮಾರು 11 ಸ್ಟಾರ್‌ಗಳಿಗೆ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೆ ‘ಶೆಟ್ರ ಗ್ಯಾಂಗ್’ ಗೆ ಆಹ್ವಾನ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.

ಮದುವೆಯ ಬಳಿಕ ನಟಿ ರಶ್ಮಿಕಾ ಮಂದಣ್ಣ ತಮ್ಮ ಹೆಸರು ಬದಲಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಕಾರ್ಯಕ್ರಮದಲ್ಲಿ ‘ರುಷಿ’ ಎಂಬ ಹೆಸರನ್ನು ಬಳಸಿರುವುದು ಕುತೂಹಲ ಹೆಚ್ಚಿಸಿದೆ. ವಿರೋಶ್ ಜೋಡಿ ತಮ್ಮ ಹಳದಿ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಇಂದು ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತ ವಲಯದವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ : ಕ್ರೀಡಾ ಲೋಕಕ್ಕೆ ಕಪ್ಪುಚುಕ್ಕೆ | ಮಿಲ್ಲರ್ ಜೊತೆ ರೀಲ್ಸ್ ಮಾಡಿದ್ದಕ್ಕೆ ಇನ್‌ಫ್ಲುಯೆನ್ಸರ್‌ಗೆ ಅತ್ಯಾಚಾರದ ಬೆದರಿಕೆ!



















