ದುಬೈ: ಮಾರ್ಚ್ 4, ಮಂಗಳವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸ್ವೀಕರಿಸಲು ಬಂದಾಗ, ವಿರಾಟ್ ಕೊಹ್ಲಿ (Virat kohli) ಹೆಮ್ಮೆಯಿಂದ ಇದ್ದರು. ಮಾಜಿ ನಾಯಕ ಶತಕದ ಹಾದಿಯಲ್ಲಿ ಎಡವಿ 84 ರನ್ ಗಳಿಸಿ ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ದಾಖಲೆಯ ಚೇಸ್ ನಡೆಸಲು ಸಹಾಯ ಮಾಡಿದ್ದರು. ಆಲ್ಲದೆ, ವಿಶ್ವಚಾಂಪಿಯನ್ ತಂಡವನ್ನು ಟೂರ್ನಮೆಂಟ್‌ನಿಂದ ಹೊರಗಿಟ್ಟರು.
Every time @imVkohli takes the field, records be like '𝙙𝙖𝙧𝙧 𝙠𝙖 𝙢𝙖𝙝𝙖𝙪𝙡 𝙝𝙖𝙞' 🥵
— Star Sports (@StarSportsIndia) March 4, 2025
Another run chase, another Virat Kohli masterclass! 👏#ChampionsTrophyOnJioStar FINAL 👉 SUN, 9th March, 1:30 PM on Star Sports 1, Star Sports 1 Hindi, Star Sports 2 & Sports18-1!… pic.twitter.com/tEtHfdKs6L
ಆಸ್ಟ್ರೇಲಿಯಾ ಬೌಲರ್‌ಗಳನ್ನು ಎದುರಿಸುತ್ತಿದ್ದಾಗ ತಾವು ಯಾವ ಹಂತದಲ್ಲೂ ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಚಿಂತಿಸಲಿಲ್ಲ ಎಂದು ವಿರಾಟ್ ಕೊಹ್ಲಿ ಪ್ರಶಸ್ತಿ ಪ್ರಧಾನ ವೇದಿಕೆಯಲ್ಲಿ ನುಡಿದರು. 44ನೇ ಓವರ್‌ನಲ್ಲಿ ಸ್ಕೋರ್‌ಬೋರ್ಡ್ ಒತ್ತಡವನ್ನು ಕಡಿಮೆ ಮಾಡಲು ದೊಡ್ಡ ಶಾಟ್ ಹೋಗಲು ಪ್ರಯತ್ನಿಸಿದ ಕೊಹ್ಲಿ, ಲಾಂಗ್-ಆನ್ ಫೀಲ್ಡರ್‌ಗೆ ಕ್ಯಾಚ್ ನೀಡಿದರು. ಅವರು ನಿಧಾನವಾಗಿ ಆಡಿದ್ದರೆ 52ನೇ ಶತಕ ಪೂರೈಸಬಹುದಾಗಿತ್ತು.
“ನಾನು ದಾಖಲೆಗಳ ಬಗ್ಗೆ ಎಂದಿಗೂ ಗಮನ ಹರಿಸಿರುವುದಿಲ್ಲ. ನೀವು ಮೈಲಿಗಲ್ಲುಗಳ ಬಗ್ಗೆ ಚಿಂತಿಸದೆ ಆಟ ಆಡಿದರೆ, ಆಟ ಅದರ ಪಾಡಿಗೆ ಮುಂದುವರಿಯುತ್ತದೆ. ನಾನು ಮೂರಂಕಿ ಗಡಿಯನ್ನು ತಲುಪಿದರೆ ಚೆನ್ನಾಗಿತ್ತು. ಆದರೆ ಗೆಲುವು ನನಗೆ ಮುಖ್ಯ. ನನಗೆ ಇಂತಹ ವೈಯಕ್ತಿಕ ದಾಖಲೆಗಳು ಈಗ ಅಷ್ಟು ಮಹತ್ವಪೂರ್ಣವಾಗಿಲ್ಲ,” ಎಂದು ಕೊಹ್ಲಿ ಹೇಳಿದರು.
ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಇನಿಂಗ್ಸ್ ಅನ್ನು ಪಾಕಿಸ್ತಾನದ ವಿರುದ್ಧದ ಶತಕದೊಂದಿಗೆ ಹೋಲಿಕೆ ಮಾಡಿದ್ದಾರೆ. ದುಬೈಯಲ್ಲಿ ವಿಜಯ ಸಾಧಿಸಲು ಸ್ಟ್ರೈಕ್ ರೋಟೇಶನ್ ಅತಿ ಮುಖ್ಯ ಅಂಶ ಎಂಬುದನ್ನು ಅವರು ಹೇಳಿದರು.
ಚೇಸ್ ಮಾಸ್ಟರ್ ಕೊಹ್ಲಿ ಮತ್ತೆ ಮಿಂಚು
ಕೊಹ್ಲಿ ಆಸ್ಟ್ರೇಲಿಯಾದ ವಿರುದ್ಧ 98 ಎಸೆತಗಳಲ್ಲಿ 84 ರನ್ ಬಾರಿಸಿ, 265 ರನ್‌ಗಳ ಗುರಿ ತಲುಪಲು ಭಾರತಕ್ಕೆ ನೆರವಾದರು.
ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧದ ಇನ್ನಿಂಗ್ಸ್‌ನಲ್ಲಿ ಹೇಗೆ ವೇಗದ ಸಿಂಗಲ್ಸ್ ಮತ್ತು ಡಬಲ್ಸ್ ತೆಗೆದಿದ್ದರೋ ಅದೇ ರೀತಿ ಈ ಪಂದ್ಯದಲ್ಲಿಯೂ ಆಡಿದ್ದರು. ಈ ಪಂದ್ಯದಲ್ಲಿಯೂ ಅವರು ಕೇವಲ ಐದು ಬೌಂಡರಿಗಳನ್ನಷ್ಟೇ ಬಾರಿಸಿದರು.
ಮುಖ್ಯ ಅಂಶ ಒತ್ತಡ: ಕೊಹ್ಲಿ
ಕೊಹ್ಲಿಯ ಪರಿಪೂರ್ಣ ಬ್ಯಾಟಿಂಗ್ನಲ್ಲಿ 56 ಸಿಂಗಲ್ಸ್ ಮತ್ತು 4 ಡಬಲ್ಸ್ ಹೊಂದಿತ್ತು. ಇದು ಅವರ ಅದ್ಭುತ ಫಿಟ್ನೆಸ್ ಮಟ್ಟವನ್ನು ಪ್ರದರ್ಶಿಸುತ್ತದೆ.
“ಎಲ್ಲವೂ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಕ್ರೀಸ್ನಲ್ಲಿ ನಾನು ಒತ್ತಡಕ್ಕೆ ಒಳಗಾಗದೆ ಆಟ ಆಡಿದ್ದೇನೆ. ನನ್ನ ಇನ್ನಿಂಗ್ಸ್‌ನ ಅತ್ಯಂತ ಸಂತೋಷದ ಸಂಗತಿ ಎಂದರೆ, ನಾನು ತೆಗೆದುಕೊಂಡ ಸಿಂಗಲ್ಸ್,” ಎಂದು ಕೊಹ್ಲಿ ಹೇಳಿದ್ದಾರೆ.
ಅತ್ಯುತ್ತಮ ಹಂತವೇ?
ಏಕದಿನ ಕ್ರಿಕೆಟ್‌ನ ಅತ್ಯುತ್ತಮ ಆಟಗಾರನಾಗಿರುವ ಕೊಹ್ಲಿಯು, ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದೀರಾ ಎಂಬ ಪ್ರಶ್ನೆಗೂ ಉತ್ತರಿಸಿದರು.
“ನನಗೆ ತಿಳಿದಿಲ್ಲ. ಅದನ್ನು ನೀವು ನಿರ್ಧರಿಸಬೇಕು. ನಾನು ಈ ಸಂಗತಿಗಳ ಬಗ್ಗೆ ಚಿಂತಿಸುತ್ತಿಲ್ಲ. ನನ್ನ ತಂಡವು ನನ್ನಿಂದ ಏನನ್ನು ನಿರೀಕ್ಷಿಸುತ್ತದೋ ಅದನ್ನು ನಾನು ಮಾಡಲು ಇಚ್ಛಿಸುತ್ತೇನೆ, ಎಂದು ಕೊಹ್ಲಿ ಹೇಳಿದ್ದಾರೆ.