ದಕ್ಷಿಣ ಆಫ್ರಿಕಾದ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಬ್ಯಾಟರ್ ಎಬಿ ಡಿ ವಿಲಿಯರ್ಸ್ ಅವರು, ವಿರಾಟ್ ಕೋಹ್ಲಿ ತಮಗೆ ನೀಡಿರುವ ಸಂದೇಶವೊಂದನ್ನು ಬಹಿರಂಗ ಮಾಡಿದ್ದಾರೆ. ‘ಈ ಸಲಾ ಕಪ್ ನಮ್ದೆ’ ಎಂಬ ಪ್ರಸಿದ್ಧ ಆರ್ಸಿಬಿ ಅಭಿಮಾನಿಗಳ ಘೋಷವಾಕ್ಯವನ್ನು ಎಲ್ಲಿಯೂ ಬಳಸಬೇಡಿ ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ. ಆರ್ಸಿಬಿ ತಂಡವು 17 ವರ್ಷಗಳಿಂದ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲದ ಕಾರಣ, ನಕಾರಾತ್ಮಕವಾಗಿ ಬಳಕೆಯಾಗುತ್ತಿದೆ.
ಇತ್ತೀಚೆಗೆ, 2011-2021ರವರೆಗೆ 11 ಋತುಗಳ ಕಾಲ ಆರ್ಸಿಬಿ ತಂಡದಲ್ಲಿ ಆಡಿದ್ದ ಎಬಿ ಡಿ ವಿಲಿಯರ್ಸ್ ಅವರು, ವಿರಾಟ್ ಕೊಹ್ಲಿ ಅವರು ತಮಗೆ ಈ ಘೋಷವಾಕ್ಯವನ್ನು ಇನ್ನು ಮುಂದೆ ಬಳಸಬೇಡಿ ಎಂದು ಸಂದೇಶ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ. ಲೆಜೆಂಡರಿ ಬ್ಯಾಟ್ಸ್ಮನ್ ಅವರು, ಆರ್ಸಿಬಿ ತಂಡವು ಮುಂದಿನ ಋತುವಿನಲ್ಲಿ ತಮ್ಮ ಮೊದಲ ಐಪಿಎಲ್ ಟ್ರೋಫಿಯನ್ನು ಗೆದ್ದರೆ, ಅವರೊಂದಿಗೆ ಸಂಭ್ರಮಿಸಲು ಬಯಸುತ್ತೇನೆ ಎಂದೂ ಹೇಳಿದ್ದಾರೆ.
“ನನಗೆ ವಿರಾಟ್ ಅವರಿಂದ ನೇರ ಸಂದೇಶ ಬಂದಿತು. ಅವರು, ‘ದಯವಿಟ್ಟು ಇನ್ನು ಮುಂದೆ ಅದನ್ನು ಹೇಳಬೇಡಿ’ ಎಂದು ಹೇಳಿದ್ದಾರೆ. ಹೀಗಾಗಿ, ನಾನು ಸ್ವಲ್ಪ ತೊಂದರೆಗೆ ಒಳಗಾಗಿದ್ದೇನೆ. ಆದರೆ, ನಾನು ನಿಜವಾಗಿಯೂ ಈ ವಾಕ್ವಯನ್ನು ಹಲವು ಬಾರಿ ಹೇಳಿ ಸುಸ್ತಾಗಿದ್ದೇನೆ. ಈ ಋತುವಿನಲ್ಲಿ ಟ್ರೋಫಿ ನಮ್ಮದಾಗಲಿದೆ’ . ಇದು ಐಪಿಎಲ್, ಇಲ್ಲಿ 10 ವಿಶ್ವಮಟ್ಟದ ತಂಡಗಳು ಇವೆ. ಅವುಗಳು ವಿಶ್ವಕಪ್ ಗೆಲ್ಲಬಹುದು ., ಐಪಿಎಲ್ ಗೆಲ್ಲಲು ಅತ್ಯಂತ ಕಠಿಣ ಟೂರ್ನಮೆಂಟ್,” ಎಂದು ಡಿ ವಿಲಿಯರ್ಸ್ ಅವರು ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.
“ಪ್ರಯಾಣ, ವಿವಿಧ ತಂಡಗಳು, ವಿವಿಧ ತಂತ್ರಗಳು ಮತ್ತು ಗಾಯಗಳಂತಹ ಹಲವು ಅಂಶಗಳು ಟೂರ್ನಮೆಂಟ್ ನಲ್ಲಿ ಪ್ರಮುಖ. ಆದರೆ, ಟೂರ್ನಮೆಂಟ್ನ ಕೊನೆಯ ತನಕ ಶಕ್ತಿ ಉಳಿಸಿಕೊಳ್ಳುವ ತಂಡವು ಸಾಮಾನ್ಯವಾಗಿ ಟ್ರೋಫಿ ಗೆಲ್ಲುತ್ತದೆ. ತಮ್ಮ ತವರು ನೆಲದ ಅನುಕೂಲವನ್ನು ಉತ್ತಮವಾಗಿ ಬಳಸಿಕೊಳ್ಳುವ ತಂಡಗಳು ಟ್ರೋಫಿಯನ್ನು ಗೆಲ್ಲುತ್ತವೆ. ಹೀಗಾಗಿ, ನಾನು ಈ ವರ್ಷ, 18ನೇ ಋತುವಾಗಿದ್ದು 18ನೇ ಜರ್ಸಿ ಸಂಖ್ಯೆಯ ಕೊಹ್ಲಿಯ ತಂಡ ಕಪ್ ಗೆಲ್ಲಲಿ ಎಂದು ಭಾವಿಸುತ್ತೇನೆ ನಾನು ವಿರಾಟ್ ಅವರೊಂದಿಗೆ ಟ್ರೋಫಿಯನ್ನು ಎತ್ತಲು ಅಲ್ಲಿಗೆ ಬರುತ್ತೇನೆ,” ಎಂದು ವಿಲಿಯರ್ಸ್ ಹೇಳಿದ್ದಾರೆ.
ಆರ್ಸಿಬಿ ಇತಿಹಾಸ
ಆರ್ಸಿಬಿ ತಂಡವು ಇದುವರೆಗೆ ಐಪಿಎಲ್ ಫೈನಲ್ಗೆ ಮೂರು ಬಾರಿ ತಲುಪಿದೆ (2009, 2011 ಮತ್ತು 2016). ಆದರೆ, ಎಲ್ಲಾ ಮೂರು ಸಂದರ್ಭಗಳಲ್ಲಿ ಅಭಿಮಾನಿಗಳಿಗೆ ನಿರಾಶೆಯನ್ನು ಮಾತ್ರ ನೀಡಿದೆ. 2016ರ ಋತುವು ಆರ್ಸಸಿಬಿ ತಂಡಕ್ಕೆ ಟ್ರೋಫಿಯನ್ನು ತರಬಹುದಾದ ವರ್ಷವೆಂದು ನಿರೀಕ್ಷಿಸಲಾಗಿತ್ತು, ಏಕೆಂದರೆ ನಾಯಕ ವಿರಾಟ್ ಕೋಹ್ಲಿ ಅವರು 973 ರನ್‌ಗಳನ್ನು ಗಳಿಸಿ ಐಪಿಎಲ್ ಇತಿಹಾಸದಲ್ಲಿ ದಾಖಲೆ ಸ್ಥಾಪಿಸಿದ್ದರು.
ಫೈನಲ್‌ನಲ್ಲಿ ಆರ್ಸಿಬಿ ತಂಡವು 209 ರನ್‌ಗಳ ಗುರಿಯನ್ನು ಪಡೆತ್ತು. ಉತ್ತಮ ಪ್ರಾರಂಭ ಬೇರೆ ಮಾಡಿತ್ತು. ಆದರೆ, ನಂತರ ಅವರು ನಾಟಕೀಯವಾಗಿ ಕುಸಿದು, 20 ಓವರ್‌ಗಳಲ್ಲಿ 200/7 ರನ್‌ಗಳನ್ನು ಮಾತ್ರ ಗಳಿಸಿ ಸೋಲನ್ನು ಅನುಭವಿಸಿತ್ತು.