ದುಬೈ: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli), ಒಡಿಐ (ODI) ಚೇಸಿಂಗ್‌ನಲ್ಲಿ 8,000 ರನ್ ಪೂರೈಸಿದ ಇತಿಹಾಸದ ಎರಡನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಮಾರ್ಚ್ 4ರಂದು ಆಸ್ಟ್ರೇಲಿಯಾದ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಅರ್ಧಶತಕ ಪೂರೈಸಿದ ಕೂಡಲೇ ಈ ಮೈಲಿಗಲ್ಲನ್ನು ತಲುಪಿದರು. ಕೊಹ್ಲಿ ಇದನ್ನು ಕೇವಲ 170 ಪಂದ್ಯಗಳಲ್ಲಿ ಸಾಧಿಸಿದ್ದು, ಸಚಿನ್ ತೆಂಡುಲ್ಕರ್ ನಂತರ ಈ ಸಾಧನೆಯನ್ನು ಮಾಡಿದ ಎರಡನೇ ಆಟಗಾರನಾಗಿದ್ದಾರೆ. ಈ ಅಪರೂಪದ ದಾಖಲೆ ಪಡೆದ ಅವರು, 265 ರನ್ ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಭಾರತಕ್ಕೆ ಬಹುಮುಖ್ಯ ಕೊಡುಗೆ ನೀಡಿದರು.
Virat Kohli turned up once again when it mattered – this time with a half-century in a chase in the semi-final against Australia 👏
— ICC (@ICC) March 4, 2025
He wins the @aramco POTM award 🎖️ #ChampionsTrophy pic.twitter.com/0wd9zT1Ym8
ತಮ್ಮ ವೃತ್ತಿಜೀವನದ ಕೊನೆಗಾಲದಲ್ಲಿ ಸಚಿನ್ ತೆಂಡುಲ್ಕರ್ ಒಟ್ಟು 242 ಪಂದ್ಯಗಳಲ್ಲಿ 88.4 ಸ್ಟ್ರೈಕ್ ರೇಟ್‌ನಲ್ಲಿ 8720 ರನ್ ಪೇರಿಸಿದ್ದರು. ಆದರೆ ಕೊಹ್ಲಿ 93.30 ಸ್ಟ್ರೈಕ್ ರೇಟ್ ಮತ್ತು 64.71 ಸರಾಸರಿಯಲ್ಲಿ 8,000 ರನ್ ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್ ಕಾಣದೆ ಟೂರ್ನಮೆಂಟ್‌ಗೆ ಪ್ರವೇಶಿಸಿದ್ದ ಕೊಹ್ಲಿ, ತಮ್ಮ ಉತ್ತಮ ಆಟದ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಶತಕ ಬಾರಿಸುವ ಮೂಲಕ ಟೂರ್ನಮೆಂಟ್‌ಗೆ ಭರ್ಜರಿ ಆರಂಭ ನೀಡಿದ ಅವರು, ಆಸ್ಟ್ರೇಲಿಯಾದ ವಿರುದ್ಧ 53 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಭಾರತದ ಆಪತ್ಬಾಂಧವ ಎನಿಸಿದರು.
ಇದನ್ನೂ ಓದಿ: http://Virat kohli : ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಶತಕ ಮಿಸ್; ಪಂದ್ಯದ ಬಳಿಕ ಕೊಹ್ಲಿ ಹೇಳಿದ್ದೇನು?
ಕೊಹ್ಲಿ ಈಗ ಒಡಿಐ ಶತಕಗಳ ಪಟ್ಟಿಯಲ್ಲೂ ತೆಂಡುಲ್ಕರ್ ಅವರನ್ನು ಮೀರಿಸಿದ್ದಾರೆ. ಅವರ ಖಾತೆಯಲ್ಲಿ ಈಗ 51 ಶತಕಗಳಿದ್ದು, ತೆಂಡುಲ್ಕರ್ 49 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅದರಲ್ಲೂ ಭಾರತವನ್ನು ಗೆಲುವಿನ ದಡ ಸೇರಿಸಿದ ಚೇಸಿಂಗ್ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 24 ಶತಕಗಳನ್ನು ಹೊಂದಿದ್ದು, ತೆಂಡುಲ್ಕರ್ ಕೇವಲ 14 ಶತಕಗಳನ್ನು ಮಾತ್ರ ಮಾಡಿದ್ದಾರೆ. ಈ ಮೂಲಕ ಕೊಹ್ಲಿ ‘ಚೇಸ್ ಮಾಸ್ಟರ್’ ಎಂಬ ತಮ್ಮ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಿದ್ದಾರೆ.
ಮಂಜ್ರೇಕರ್ ಹೊಗಳಿಕೆ
ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈ ಹೋಲಿಕೆಯನ್ನು ವಿಶ್ಲೇಷಿಸುತ್ತಾ, ಕೊಹ್ಲಿ ಉನ್ನತ ಒತ್ತಡದ ಚೇಸಿಂಗ್ ಪಂದ್ಯಗಳಲ್ಲಿ ಹೆಚ್ಚು ಬಾರಿ ಭಾರತವನ್ನು ಗೆಲುವಿಗೆ ಮುನ್ನಡೆಸಿರುವುದಾಗಿ ಹೇಳಿದ್ದಾರೆ. ಅಭಿಮಾನಿಗಳೂ ಕೊಹ್ಲಿಯ ನಿರ್ವಹಣಾ ಸಾಮರ್ಥ್ಯವನ್ನು ಪ್ರಶಂಸಿಸುತ್ತಿದ್ದಾರೆ. ಅವರು ತಾಳ್ಮೆ, ಆಕ್ರಮಣ ಮತ್ತು ಉತ್ತಮ ಯೋಜನೆಯೊಂದಿಗೆ ಭಾರತವನ್ನು ನಿರಂತರವಾಗಿ ಜಯದ ದಡಕ್ಕೆ ತಲುಪಿಸುತ್ತಿರುವುದನ್ನು ಒತ್ತಿ ಹೇಳಿದ್ದಾರೆ. ಕೊಹ್ಲಿ ತಮ್ಮ ಚೇಸಿಂಗ್ ಸಾಮರ್ಥ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದರಿಂದ, ಅವರನ್ನು ಸಚಿನ್ ತೆಂಡುಲ್ಕರ್ ಜತೆ ಹೋಲಿಸುವ ಚರ್ಚೆಗಳು ಮುಂದುವರೆಯುತ್ತವೆ. ಆದರೆ, ಭಾರತ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲಲು ಮುಂದುವರಿಯುತ್ತಿರುವಾಗ, ಕೊಹ್ಲಿಯ ಬ್ಯಾಟಿಂಗ್ ಬಲದಲ್ಲಿ ಟ್ರೋಫಿ ತಂದಕೊಡಲಿದ್ದಾರಾ ಎಂಬ ಕುತೂಹಲ ಮೂಡಿದೆ.