ಸ್ಟಾರ್‌ಹಾಗೂ ಸ್ಟೈಲಿಸ್ಟ್‌ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಹೊಸ ಐಷಾರಾಮಿ ಬಂಗಲೆ ಕಟ್ಟಿಸಿದ್ದಾರೆ. ಶೀಘ್ರದಲ್ಲೇ ಆ ಮನೆಯ ಗೃಹಪ್ರವೇಶ ನಡೆಯಲಿದ್ದು, ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಇಬ್ಬರು ಮಕ್ಕಳ ಜತೆಗೂಡಿ ಆ ಮನೆಯಲ್ಲಿ ವಾಸ ಆರಂಭಿಸಲಿದ್ದಾರೆ. ಅಲಿಬಾಗ್‌ನಲ್ಲಿ ನಿರ್ಮಾಣಗೊಂಡಿರುವ 32 ಕೋಟಿ ರೂಪಾಯಿ ಮೌಲ್ಯದ ಈ ಮನೆಯ ವಿಡಿಯೊಗಳು ಎಲ್ಲರ ಗಮನ ಸೆಳೆಯುತ್ತಿವೆ.
ದಕ್ಷಿಣ ಮುಂಬೈನ ಅಲಿಬಾಗ್ನಲ್ಲಿ 2022ರಲ್ಲಿ 19 ಕೋಟಿಗೆ ಸೈಟ್‌ಖರೀದಿಸಿದ್ದ ಕೊಹ್ಲಿ ಈಗ 32 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಬಂಗಲೆ ನಿರ್ಮಿಸಿದ್ದಾರೆ. ಇದೀಗ ಈ ಮನೆ ಸೇರಿಕೊಳ್ಳಲಿದ್ದಾರೆ. ಇನ್ನೂಂದು ವಿಶೇಷವೂ ಇದೆ. ಈ ಮನೆಗೆ ಅವರು ಪ್ರವೇಶ ಪಡೆಯಲು ಮುಂದಾಗಿರುವ ಕಾರಣ ಕೊಹ್ಲಿ ತಮ್ಮ ಫ್ಯಾಮಿಲಿ ಸಮೇತ ಭಾರತ ಬಿಟ್ಟು ಲಂಡನ್ಗೆ ಶಾಶ್ವತವಾಗಿ ಸ್ಥಳಾಂತರವಾಗಲಿದ್ದಾರೆ ಎಂಬ ವರದಿ ಸುಳ್ಳಾಗಿದೆ.
ಕೊಹ್ಲಿ ಮತ್ತು ಅನುಷ್ಕಾ ಅವರ ಮನೆಯನ್ನು ಫಿಲಿಪ್ ಫೌಚೆ ನೇತೃತ್ವದ ಸ್ಟೀಫನ್ ಆಂಟೋನಿ ಓಲ್ಮೆಸ್ಡಾಲ್ ಟ್ರೂನ್ ಆರ್ಕಿಟೆಕ್ಟ್ಸ್ (SAOTA) ವಿನ್ಯಾಸಗೊಳಿಸಿದೆ ಎಂದು ಆರ್ಕಿಟೆಕ್ಚರಲ್ ಡೈಜೆಸ್ಟ್ ಹೇಳಿದೆ. ಇದೇ ವಾರ ಗೃಹ ಪ್ರವೇಶ ನಡೆಯಲಿದ್ದು, ಮಗ ಅಕಾಯ್ ಮತ್ತ ಮಗಳು ವಮಿಕಾ ಕೂಡ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. 7,171 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಮನೆ ಇದಾಗಿದೆ.
ವಿರಾಟ್ ಕೊಹ್ಲಿ ಗುರುಗ್ರಾಮದಲ್ಲಿ 80 ಕೋಟಿ ಮೌಲ್ಯದ ಬಂಗಲೆಯನ್ನೂ ಹೊಂದಿದ್ದಾರೆ. ವಿರಾಟ್ ಕೊಹ್ಲಿ 2022 ರಲ್ಲಿ ದಿವಂಗತ ಗಾಯಕ ಕಿಶೋರ್ ಕುಮಾರ್ ಅವರ ಬಂಗಲೆಯನ್ನು 5 ವರ್ಷಗಳ ಕಾಲ ಭೋಗ್ಯಕ್ಕೆ ತೆಗೆದುಕೊಂಡಿದ್ದಾರೆ. ಅದೇ ರೀತಿ ವಿರಾಟ್-ಅನುಷ್ಕಾ ಮುಂಬೈನ ಐಷಾರಾಮಿ ಪ್ರದೇಶವಾದ ಜುಹೂನಲ್ಲಿರುವ ಫ್ಲಾಟ್‌ಗೆ ತಿಂಗಳಿಗೆ 2.76 ಲಕ್ಷ ರೂ ಬಾಡಿಗೆ ಪಾವತಿಸುತ್ತಾರೆ ಎನ್ನಲಾಗಿದೆ.

ಬಂಗಲೆಯಲ್ಲಿ ಏನೆಲ್ಲಾ ಇದೆ?
ಈ ಭವ್ಯ ಬಂಗಲೆಯಲ್ಲಿ ಎಲ್ಲವೂ ದುಬಾರಿ ಮತ್ತು ಐಷರಾಮಿ ವಸ್ತುಗಳೇ ತುಂಬಿವೆ. ವಿಶಾಲವಾದ ಉದ್ಯಾನವನ, ದೊಡ್ಡ ಜಿಮ್ ಇದೆ, ಕ್ಲೈಮೇಟ್‌ಕಂಟ್ರೋಲ್‌ಇರುವ ಸ್ಮಿಮ್ಮಿಂಗ್ ಪೂಲ್, ಹಾಟ್ ಟಬ್, ಬೆಸ್ಪೋಕ್ ಕಿಚನ್‌ಇದೆ.
ಲಂಡನ್ಗೆ ಹೋಗುವುದಿಲ್ಲವೇ?
ಟಿ20 ವಿಶ್ವಕಪ್ ಗೆದ್ದ ತಕ್ಷಣವೇ ಆ ಮಾದರಿಗೆ ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ, ತನ್ನ ಕುಟುಂಬದೊಂದಿಗೆ ಲಂಡನ್ಗೆ ಹೋಗಿದ್ದರು. ಹೀಗಾಗಿ ಮಾಜಿ ನಾಯಕ ತಮ್ಮ ಕುಟುಂಬ ಸದಸ್ಯರೊಂದಿಗೆ ಲಂಡನ್‌ನಲ್ಲಿಯೇ ನೆಲೆಸುತ್ತಾರೆ ಎಂಬ ಸುದ್ದಿಗೆ ಜೀವ ಬಂದಿತ್ತು. ಅನುಷ್ಕಾ ತಮ್ಮ ಪುತ್ರ ಅಕಾಯ್‌ಗೆ ಜನ್ಮ ನೀಡಿದ್ದು ಕೂಡ ಲಂಡನ್‌ನಲ್ಲಿ. ಅಲ್ಲಿನ ಪೌರತ್ವಕ್ಕಾಗಿ ಹಾಗೆ ಮಾಡಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ಅವರು ಹೊಸ ಮನೆ ಕಟ್ಟಿರುವ ಹಿನ್ನೆಲೆಯಲ್ಲಿ ಈ ಸಾಧ್ಯತೆಗಳನ್ನು ತಳ್ಳಿ ಹಾಕಲಾಗಿದೆ.