ಹೊಸದಿಲ್ಲಿ: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ವಿಶೇಷ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ ಆಮ್ಲೆಟ್ ತಯಾರಿಸುವಾಗ ಅದರೊಳಗೆ ಓರಿಯೋ ಬಿಸ್ಕೆಟ್ಗಳನ್ನು ಮಿಶ್ರಣ ಮಾಡುವ ದೃಶ್ಯ ಕಾಣಸಿಗುತ್ತದೆ. ಈ ವಿಡಿಯೋವನ್ನು ನೋಡಿದ ನೆಟಿಜನ್ನ್ಗಳು ಮುಖಸಿಂಡರಿಸಿದ್ದಾರೆ ಮತ್ತು ವ್ಯಾಪಾರಿಯನ್ನು ಟೀಕಿಸಿದ್ದಾರೆ. ಕೆಲವು ಬಳಕೆದಾರರು ಅವನನ್ನು ಜೈಲಿಗೆ ಕಳುಹಿಸಬೇಕೆಂದು ಕಟು ಟೀಕೆ ಮಾಡಿದ್ದಾರೆ.
ವಿಡಿಯೋದಲ್ಲಿ, ಬೀದಿ ಬದಿಯ ವ್ಯಾಪಾರಿ ಮೊದಲು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಸುರಿದಿದ್ದಾನೆ. ನಂತರ ಮೊಟ್ಟೆ ಮಿಶ್ರಿತ ಹಿಟ್ಟನ್ನು ಬಾಣಲೆಯ ಮೇಲೆ ಹರಡಿ, ಅದರ ಮೇಲೆ ಓರಿಯೋ ಬಿಸ್ಕೆಟ್ಗಳನ್ನು ಹಾಕಿದ್ದಾನೆ. . ಬಿಸ್ಕೆಟ್ಗಳು ಸ್ವಲ್ಪ ಕರಿದ ನಂತರ, ಅವನು ಆಮ್ಲೆಟ್ ಅನ್ನು ಪ್ಲೇಟ್ಗೆ ಹಾಕಿ ಅದರ ಮೇಲೆ ಸಾಸ್ ಹಾಕಿ ಸರ್ವ್ ಮಾಡಿದ್ದಾನೆ.
ಈ ವಿಡಿಯೋವನ್ನು ಫುಡ್ ವ್ಲಾಗರ್ ಶಿವಂ ಶರ್ಮಾ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗಾಗಲೇ 5 ಮಿಲಿಯನ್ ವ್ಯೂಸ್ ಮೀರಿದೆ. ವಿಡಿಯೋವನ್ನು ನೋಡಿದ ನೆಟಿಜನ್ಗಳು ಇದನ್ನು “ಆಹಾರದ ಅಪರಾಧ” ಎಂದು ಕರೆದಿದ್ದಾರೆ. ಅನೇಕರು ಈ ರೀತಿಯ ವಿಚಿತ್ರ ಆಹಾರ ಪ್ರಯೋಗಗಳನ್ನು ನಿಲ್ಲಿಸಲು ಕರೆ ನೀಡಿದ್ದಾರೆ.
ಇದು ಮೊದಲ ಬಾರಿ ಅಲ್ಲ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇಂತಹ ವಿಚಿತ್ರ ಆಹಾರ ಪ್ರಯೋಗಗಳು ಟ್ರೆಂಡ್ ಆಗಿವೆ. ಕೆಲವು ವಾರಗಳ ಹಿಂದೆ, ಬೀದಿ ಬದಿಯ ವ್ಯಾಪಾರಿಯೊಬ್ಬ ‘ಜೀರಾ ಸೋಡಾ’ ಮತ್ತು ಪುಡಿ ಮಾಡಿದ ಚಾಕೊಲೇಟ್ ಕ್ರೀಮ್ ಓರಿಯೋ ಬಿಸ್ಕೆಟ್ಗಳಿಂದ ಆಮ್ಲೆಟ್ ತಯಾರಿಸಿದ್ದ ವಿಡಿಯೋವೂ ವೈರಲ್ ಆಗಿತ್ತು.
ಈ ರೀತಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದರಿಂದ, ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಚರ್ಚೆಗಳು ಹೆಚ್ಚಾಗಿವೆ. ನೆಟಿಜನ್ಗಳು ಇಂತಹ ಪ್ರಯೋಗಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ.
ಈ ಬಾರಿ ಓರಿಯೋ ಆಮ್ಲೆಟ್ ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ಬಿರುಸಿನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇಂತಹ ವಿಚಿತ್ರ ಆಹಾರ ಪ್ರಯೋಗಗಳು ಮುಂದುವರೆಯುತ್ತಿದ್ದರೆ, ಅದರ ಪರಿಣಾಮಗಳು ಏನಾಗಬಹುದು ಎಂಬುದು ಇನ್ನೂ ಗಂಭೀರ ಚರ್ಚೆಯ ವಿಷಯವಾಗಿದೆ.