ಬೆಂಗಳೂರು: ವಿಧಾನ ಪರಿಷತ್ ಸದಸ್ಯರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಲಕ್ಷ ಲಕ್ಷ ಹಣ ಕ್ಲೇಮ್ ಮಾಡಿರುವುದು ಕಂಡು ಬಂದಿದೆ.
ಒಂದೇ ವರ್ಷದಲ್ಲಿ ಲಕ್ಷಾಂತರ ರೂ.ಗಳನ್ನು ಸರ್ಕಾರದಿಂದ ಎಂಎಲ್ ಸಿಗಳು ಪಡೆದಿರುವ ಮಾಹಿತಿ ಬಹಿರಂಗವಾಗಿದೆ. ಮಾಹಿತಿ ಹಕ್ಕು ಕಾಯ್ದೆಯಿಂದ ಈ ಮಾಹಿತಿ ಬಹಿರಂಗವಾಗಿದೆ.

ಎಂಎಲ್ ಸಿಗಳು ಆರೋಗ್ಯಕ್ಕಾಗಿ (MLCs Health Expenditure) ಪಡೆದಿರುವ ಹಣದ ಕುರಿತ ಮಾಹಿತಿಯನ್ನು ಸಚಿವಾಲಯ ನೀಡಿದೆ. ವಿಧಾನ ಪರಿಷತ್ ಸದಸ್ಯರಿಗೂ ಆರೋಗ್ಯಕ್ಕಾಗಿ ಸರ್ಕಾರದಿಂದ ಹಣ ಕ್ಲೇಮ್ ಮಾಡುವ ಅವಕಾಶ ಇರುತ್ತದೆ. ಹೀಗಾಗಿ 2023ರ ಮೇ 1 ರಿಂದ 2024ರ ಜುಲೈ ತಿಂಗಳವರೆಗೆ ಯಾರು ಎಷ್ಟು ಹಣ ಪಡೆದಿದ್ದಾರೆ ಎಂಬ ಮಾಹಿತಿಯನ್ನು ವಿಧಾನ ಪರಿಷತ್ ಸಚಿವಾಲಯ ತಿಳಿಸಿದೆ.

ಎಂಎಲ್ ಸಿ ಭಾರತಿ ಶೆಟ್ಟಿ ಒಂದು ವರ್ಷದಲ್ಲಿ 48.70 ಲಕ್ಷ ರೂಪಾಯಿ ಕ್ಲೇಮ್ ಮಾಡುವ ಮೂಲಕ ಅತಿ ಹೆಚ್ಚು ಹಣ ಕ್ಲೇಮ್ ಮಾಡಿರುವ ವಿಧಾನ ಪರಿಷತ್ ಸದಸ್ಯೆಯಾಗಿದ್ದಾರೆ. ಸಿ.ಪಿ.ಯೋಗೇಶ್ವರ್ ಈ ಸಾಲಿನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಇವರು 39.64 ಲಕ್ಷ ರೂ.ಗಳನ್ನು ಸರ್ಕಾರದಿಂದ ಆರೋಗ್ಯಕ್ಕಾಗಿ ಖರ್ಚು ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಇದ್ದು, ಅಕ್ಕ ಸಚಿವರಾಗಿದ್ದರೂ ಆರೋಗ್ಯಕ್ಕಾಗಿ 17.03 ಲಕ್ಷ ರೂ.ಗಳನ್ನು ಪಡೆದಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಕೂಡ ಆರೋಗ್ಯಕ್ಕಾಗಿ ಒಂದು ವರ್ಷದಲ್ಲಿ 7.26 ಲಕ್ಷ ರೂ. ಸರ್ಕಾರದ ಹಣ ಖರ್ಚು ಮಾಡಿದ್ದಾರೆ. ಹಿರಿಯ ಶಾಸಕ ಲಕ್ಷ್ಮಣ್ ಸವದಿ 2,41,574 ರೂ.ಗಳನ್ನು ಪಡೆದಿದ್ದು, ಟಿ.ಎ. ಶರವಣ 2,14,770 ರೂ. ಖರ್ಚು ಮಾಡಿದ್ದಾರೆ. ಇನ್ನುಳಿದಂತೆ ಈ ಪಟ್ಟಿ ನೋಡುವುದಾದರೆ,

• ಹರೀಶ್ ಕುಮಾರ್- 2 ಲಕ್ಷ ರೂ.
• ಮರಿತಿಬ್ಬೇಗೌಡ- 1,54,995 ರೂ.
• ವೈ.ಎ. ನಾರಾಯಣಸ್ವಾಮಿ- 3 ಲಕ್ಷ
• ಅಬ್ದುಲ್ ಜಬ್ಬಾರ್- 1,1,345 ರೂ.
• ಸುಧಾಮ್ ದಾಸ್- 2,04,542 ರೂ.
• ಸುನೀಲ್ ವಲ್ಯಾಪುರೆ- 2,75,000 ರೂ.
• ಛಲವಾದಿ ನಾರಾಯಣಸ್ವಾಮಿ- 1,18,828 ರೂ.
• ವೈ.ಎಂ. ಸತೀಶ್- 2,77,559 ರೂ.
• ಮಧು ಮಾದೇಗೌಡ- 2,46,233 ರೂ.
• ರಘುನಾಥ್ ಮಲ್ಕಾಪುರೆ- 1,34,823 ರೂ.
• ಎಂ.ಜಿ.ಮುಳೆ- 2,24,282 ರೂಪಾಯಿ
• ಅಡಗೂರು ವಿಶ್ವನಾಥ್- 52, 127 ರೂ.
• ರಘುನಾಥ್ ರಾವ್ ಮಲ್ಕಾಪೂರೆ- 1,34,823
• ಸುಜಾ ಕುಶಾಲಪ್ಪ- 85,000 ರೂ.
• ಸಲೀಂ ಅಹ್ಮದ್-66,402 ರೂ. ಆರೋಗ್ಯಕ್ಕಾಗಿ ಖರ್ಚು ಮಾಡಿದ್ದಾರೆ.