ಬಿಗ್‌ಬಾಸ್ ಮನೆಯಿಂದ ಅಭಿಷೇಕ್ ಔಟ್ ಆಗಿದ್ದಾರೆ. ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಟಾಸ್ಕ್‌ಗಳು ಕಠಿಣವಾಗುತ್ತಿದೆ. ಇದೀಗ ಬಿಗ್ ಬಾಸ್ ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್ ಮಾಡ್ತಾ ಇರೋದು ಬಿಗ್ ಬಾಸ್ ಅಲ್ಲ, ವಿಲನ್ ಅಂತ ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ಚೈತ್ರಾ ಕುಂದಾಪುರ ಅವರು ಭೂತದ ವಿಚಾರಕ್ಕೆ ಸಖತ್ ಹೆದರುಕೊಂಡಿದ್ದರು. ಈಗಲೂ ಚೈತ್ರಾ ನಡುಗಿದ್ದಾರೆ. ಇಡೀ ಮನೆಯೇ ಈಗ ಭೂತದ ಮನೆಯಾಗಿದೆ. ಈ ಪ್ರೋಮೋ ವೈರಲ್ ಆಗುತ್ತಿದೆ.
ಮನೆಯಲ್ಲಿ ಬಿಗ್ ಬಾಸ್ ವಾಯ್ಸ್ ಕೇಳುತ್ತಿಲ್ಲ. ಭಯ ಹುಟ್ಟಿಸುವ ವಿಲನ್ ವಾಯ್ಸ್ ಕೇಳುತ್ತಿದೆ. ‘ಎಚ್ಚರ.. ನಾಳೆ ಬಾ’ ಎಂಬಂತಹ ಬರಹಗಳು ಆತಂಕ ಹುಟ್ಟಿಸಿವೆ. ಬೆಚ್ಚಿಬೀಳಿಸುವ ಮುಖವಾಡ, ಪ್ರತಿಕೃತಿಗಳು ಮನೆ ಸೇರಿವೆ. ಯಾರು ಈ ವಿಲನ್ ಎಂಬ ಆತಂಕ ಉಂಟಾಗಿದೆ.
ಮನೆಯ ಸ್ಪರ್ಧಿಗಳು ಕೂಡ ವಿಲನ್ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮನೆಯ ವಿಚಿತ್ರ ಬದಲಾವಣೆಗೆ ಹಲವರು ಬೆಚ್ಚಿಬಿದ್ದಿದ್ದಾರೆ. ಮೊದಲೇ ದೆವ್ವಗಳೆಂದರೆ ಭಯಪಡುವ ಚೈತ್ರಾ ಕುಂದಾಪುರ ಅವರು, ವಿಚಿತ್ರ ಸದ್ದಿಗೆ ಚೀರಾಡಿ ಅವಿತುಕೊಳ್ಳುತ್ತಿದ್ದಾರೆ. ಇನ್ನೂ ವಿಲನ್ ಮನೆಯಲ್ಲಿ ಏನೇನಾಗ್ತಿದೆ? ಯಾರು ಹೇಗೆ ಕಾಣಿಸಿಕೊಳ್ತಾರೆ? ಮುಂದೇನಾಗುತ್ತೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್‌ಗೆ ಗುದ್ದಿದ ಕಾರು | ತಪ್ಪಿದ ಭಾರೀ ಅನಾಹುತ



















