ಯಾದಗಿರಿ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ತೆಗ್ಗೆಳ್ಳಿ ಗ್ರಾಮದಲ್ಲಿ ಗ್ರಾಮದ ಭಗಿರಥ ತೆಗ್ಗೆಳ್ಳಿ ವೃತ್ತದಿಂದ ಬೈಚಬಾಳ್ ಹದಗೆಟ್ಟಿರುವ ರಸ್ತೆಯನ್ನು ಸಾರ್ವಜನಿಕರೇ ಹಣ ಸಂಗ್ರಹಿಸಿ ದುರಸ್ತಿ ಕಾರ್ಯ ಮಾಡಿದ್ದಾರೆ.
ಸುಮಾರು ಒಂದುವರೆ ಲಕ್ಷ ಹಣ ಸಂಗ್ರಹಿಸಿ ಗ್ರಾಮಸ್ಥರೇ ರಸ್ತೆ ದುರಸ್ಥಿ ಕಾರ್ಯ ಮಾಡಿದ್ದಾರೆ. ಹದಗೆಟ್ಟ ರಸ್ತೆಯನ್ನು ಹಣ ಕೂಡಿಸಿ ಗುಂಡಿ ಮುಚ್ಚಿಸಿ ಮಾದರಿ ಎನಿಸಿದ್ದಾರೆ.
ಸುಮಾರು ಮೂರು ಕಿಲೋಮೀಟರ್ ರಸ್ತೆ ದುರಸ್ತಿ ಕಾರ್ಯ ಮಾಡಿಸಿ ಅಚ್ಚರಿ ಮೂಡಿಸಿದ್ದಾರೆ. ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಮಾಡಿಕೊಡುವಂತೆ ಜನ ಪ್ರತಿನಿಧಿಗಳಿಗೆ ಈಗಾಗಲೇ ಅನೇಕ ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಭ್ರಮನಿರಸನಗೊಂಡ ಗ್ರಾಮಸ್ಥರೇ ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡಿದ್ದಾರೆ.
ತಮ್ಮ ಮನವಿಯನ್ನು ಸ್ವೀಕರಿಸಿ ರಸ್ತೆ ದುರಸ್ತಿ ಮಾಡಿಕೊಡದ ಜನಪ್ರತಿನಿಧಿಗಳು ಹಾಗೂ ಸರ್ಕಾರದ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಮೊಣಕಾಲುದ್ಧ ನೀರು ನಿಲ್ಲುತ್ತಿತ್ತು, ಇದರಿಂದ ಗ್ರಾಮಸ್ಥರಿಗೆ ಓಡಾಡಲು ತುಂಬಾ ಕಷ್ಟವಾಗಿತ್ತು. ಹೀಗಾಗಿ ಸ್ವತಃ ಗ್ರಾಮದಲ್ಲಿ ಗ್ರಾಮಸ್ಥರು ಹಣ ಸಂಗ್ರಹಿಸಿ ರಸ್ತೆ ಗುಂಡಿ ಮುಚ್ಚಿಸಿದ್ದಾರೆ.