ಚಾಮರಾಜನಗರ: ಕೋತಿ ಸಾವಿಗೆ ಗ್ರಾಮಸ್ಥರ ಹೃದಯ ಮಿಡಿದಿರುವ ಘಟನೆ ನಡೆದಿದೆ.
ಈ ವೇಳೆ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಮೃತ ಕೋತಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕಿನ ಹಂಗಳ ತೋಟದಲ್ಲಿ ಈ ಘಟನೆ ನಡೆದಿತ್ತು. ತೋಟದಲ್ಲಿ ಇಲಿ ವಿಷ ತಿಂದು ಕೋತಿ ಅಸ್ವಸ್ಥಗೊಂಡಿತ್ತು. ಮಂಗನ ಸ್ಥಿತಿ ಕಂಡು ಇಡೀ ಗ್ರಾಮಸ್ಥರು ಮರುಗಿದ್ದರು. ಆನಂತರ ಕೋತಿಯನ್ನು ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು
ಕೋತಿ ಪ್ರಾಣ ಉಳಿಸಲು ಪ್ರಯತ್ನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕೋತಿ ಸಾವನ್ನಪ್ಪಿದೆ. ಜನರು ಮೃತ ಮಂಗನಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಪೂಜೆ ನೆರವೇರಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಸಮಾಧಿ ತೆಗೆದು ಅಂತ್ಯಸಂಸ್ಕಾರ ನಡೆಸಲಾಗಿತ್ತು.