ಮಂಗಳೂರು: ಕಾಂತಾರ ಚಾಪ್ಟರ್ 1 ಯಶಸ್ವಿ ಹಿನ್ನೆಲೆಯಲ್ಲಿ ಹೊಂಬಾಳೆ ಸಂಸ್ಥೆಯ ಮುಖ್ಯಸ್ಥ, ನಿರ್ಮಾಪಕ ವಿಜಯ್ ಕಿರಗಂದೂರು ಕಟೀಲು ಅಮ್ಮನವರ ದೇವಿಯ ಮೊರೆ ಹೋಗಿದ್ದಾರೆ.
ಇಂದು ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ ‘ಕಾಂತಾರ’ ನಿರ್ಮಾಪಕ ವಿಜಯ್ ಕಿರಗಂದೂರು, ಶ್ರೀ ದುರ್ಗಾಪರಮೇಶ್ವರಿ ದೇವಿ ದರ್ಶನ ಪಡೆದಿದ್ದಾರೆ. ಭ್ರಾಮರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನಕ್ಕೆ ಸ್ನೇಹಿತರೊಂದಿಗೆ ವಿಜಯ್ ಕಿರಗಂದೂರು ಭೇಟಿ ನೀಡಿದ್ದು, ಕ್ಷೇತ್ರದಲ್ಲೇ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ.
ಇತ್ತ ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇನ್ನು, ಕಾಂತಾರ ಅಧ್ಯಾಯ 1 ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವಾದ್ಯಂತ 509 ಕೋಟಿ ರೂ/ ಗಳಿಸಿದೆ ಎಂದು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ತಿಳಿಸಿದೆ. ‘ಗಲ್ಲಾಪೆಟ್ಟಿಗೆಯಲ್ಲಿ ದೈವಿಕ ಸಿನಿಮೀಯ ಚಂಡಮಾರುತವು ಇನ್ನೂ ಹೆಚ್ಚಿನ ಗಳಿಕೆಯನ್ನು ಮಾಡುತ್ತಿದೆ.
VijayKiragandur-visits-Kateel-success-Kantara