ಬೆಂಗಳೂರು: ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ನೂತನ ಸಾರಥಿಯ ನೇಮಕ ವಿಚಾರ ಚರ್ಚೆಯಾಗುತ್ತಿದ್ದಂತೆ ರಾಜ್ಯದಲ್ಲೂ ರಾಜ್ಯ ಬಿಜೆಪಿ ಸಾರಥಿ ಬದಲಾವಣೆಗೆ ಕೆಲವು ನಾಯಕರು ಒತ್ತಾಯ ಮಾಡಿದ್ದರು. ಹೀಗಾಗಿ ಹೈಕಮಾಂಡ್ ಚುನಾವಣಾಧಿಕಾರಿ ನೇಮಿಸಿ, ಚುನಾವಣೆಗೆ ಸೂಚಿಸಿತ್ತು.
ಆದರೆ, ಈಗ ರಾಜ್ಯ ಬಿಜೆಪಿ ಘಟಕದಲ್ಲಿ ಬಿ.ವೈ. ವಿಜಯೇಂದ್ರರನ್ನೇ ಮುಂದುವರೆಸಲು ಹೈಕಮಾಂಡ್ ನಾಯಕರು ತೀರ್ಮಾನಿಸಿದ್ದಾರೆ ಎಂಬುವುದು ಕರ್ನಾಟಕ ನ್ಯೂಸ್ ಬೀಟ್‌ಗೆ ಬಿಜೆಪಿ ಉನ್ನತ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಈಗಾಗಲೇ ಒಂದು ವರ್ಷ ಪೂರೈಕೆ ಮಾಡಿರುವ ಬಿ.ವೈ. ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷರಾಗಿ ಪುನಾರಾಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಾಯಕರು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರರೇ ಮುಂದುವರಿಕೆ ಏಕೆ? ಎಂಬುವುದನ್ನು ನಾವು ಹೇಳ್ತೀವಿ ನೋಡಿ…
ಕರ್ನಾಟಕ ನ್ಯೂಸ್ ಬೀಟ್‌ನಲ್ಲಿ ಬಿ.ವೈ.ವಿಜಯೇಂದ್ರರ ಪುನಾರಾಯ್ಕೆಯ ಹಿನ್ನೆಲೆಯ ಕಂಪ್ಲೀಟ್ ಮಾಹಿತಿ
- ಕಳೆದೊಂದು ವರ್ಷದಿಂದ ರಾಜ್ಯ ಪ್ರವಾಸ ಮಾಡುತ್ತಾ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಬಿ.ವೈ. ವಿಜಯೇಂದ್ರ.
- ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರಾಗಿ, ಸ್ವಯಂ ವರ್ಚಸ್ಸು ವೃದ್ಧಿಸಿಕೊಂಡಿರುವ ವಿಜಯೇಂದ್ರ.
- ಬಿಜೆಪಿಯ ಹಿರಿಯ ಮುಖಂಡ ಯಡಿಯೂರಪ್ಪರ ಪುತ್ರರಾಗಿ ರಾಜಕಾರಣವನ್ನು ಹತ್ತಿರದಿಂದ ಬಲ್ಲವರಾಗಿ ಅನುಭವ ಬೆಳೆಸಿಕೊಂಡಿರುವ ವಿಜಯೇಂದ್ರ.
- ಇತ್ತ ಇಡೀ ರಾಜ್ಯದಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸುತ್ತಾ, ಯುವಕರಿಗೆ ಆದ್ಯತೆ ನೀಡುತ್ತಿರುವ ವಿಜಯೇಂದ್ರ.
- ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದ ಗೆಲುವನ್ನು ಪಕ್ಷ ತಂದು ಕೊಟ್ಟಿರುವ ವಿಜಯೇಂದ್ರ.
- ಇನ್ನು ಎಲ್ಲಾ ನಾಯಕರ ಮನವೊಲಿಕೆ ಮಾಡುತ್ತಾ, ಹಳೆಯ ಭೇರು ಹೊಸ ಚಿಗುರು ಎಂಬ ಸೂತ್ರದಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ವಿಜಯೇಂದ್ರ.
- ಇನ್ನು 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಬಳಿಕ ಸಂಘಟನಾತ್ಮಕವಾಗಿ ಪಕ್ಷವನ್ನು ಸದೃಢಗೊಳಿಸುವಲ್ಲಿ ಕಾರ್ಯೋನ್ಮುಖರಾಗಿರುವ ವಿಜಯೇಂದ್ರಗೆ ಘಟಾನುಘಟಿಗಳ ಸಾಥ್.
- ಯುವಕರಾಗಿ, ಯುವ ಕಾರ್ಯಕರ್ತರಲ್ಲಿ ಹೆಚ್ಚಿನ ಹುಮ್ಮಸ್ಸು ತುಂಬುವಲ್ಲಿ ವಿಜಯೇಂದ್ರ ಕಾರ್ಯನಿರ್ವಹಣೆ.
- ಅಷ್ಟು ಮಾತ್ರವಲ್ಲದೇ ಹೈಕಮಾಂಡ್ ನಾಯಕರ ಅಣತಿಯಂತೆ ರಾಜ್ಯದಲ್ಲಿ ಸಂಘಟನೆ, ಆರ್‌ಎಸ್‌ಎಸ್ ಪ್ರಮುಖರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಣೆ.
- ಇದೆಲ್ಲದರ ಜೊತೆಗೆ ರಾಜ್ಯಾಧ್ಯಕ್ಷ ಹುದ್ದೆಯ ಅವಧಿ 3 ವರ್ಷ. ಈಗ ವಿಜಯೇಂದ್ರ ಆಯ್ಕೆಯಾಗಿ ಕಳೆದಿರುವುದು ಕೇವಲ ಒಂದು ವರ್ಷ. ಈಗ ಅವರನ್ನು ಬದಲಾವಣೆ ಮಾಡಿದ್ರೆ, ಸಂದೇಶ ಬೇರೆಯದ್ದೇ ಹೋಗುತ್ತದೆ.
ಹೀಗಾಗಿ, ಈ ಅಂಶಗಳನ್ನು ಮುಂದಿಟ್ಟುಕೊಂಡು ಬಿ.ವೈ. ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಸಲು ಹೈಕಮಾಂಡ್ ನಾಯಕರು ನಿರ್ಧಾರರ ಮಾಡಿದ್ದಾರೆ. ಇದು “ಕರ್ನಾಟಕ ನ್ಯೂಸ್ ಬೀಟ್” ನ Exclusive ನ್ಯೂಸ್.