ಬೆಂಗಳೂರು : ರಸಗೊಬ್ಬರ ಇಲ್ಲದೆ ಇರುವುದನ್ನು ಹೇಳಿದರೆ ನಾವು ಏನೂ ಮಾಡುವುದಕ್ಕೆ ಆಗಲ್ಲ. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಆಗುತ್ತಿದೆಯಂತೆ. ನಾವು ಯಾವುದೊ ಒಂದು ಹೇಳಿದರೆ ಆಗುವುದಿಲ್ಲ. ವಿಜೆಲೆನ್ಸ್ ಇದೆ, ಸಾವಿರಾರು ರೀಟೈಲ್ ಸೆಂಡರ್ ಇದೆ. ಅಂತಹದ್ದೇನಾದರೂ ಕಂಡರೆ ಬ್ಲಾಕ್ ಲಿಸ್ಟ್ ಗೆ ಸೇರಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಅವರು, ಪೆನಾಲ್ಟಿ ಹಾಕುತ್ತೇವೆ. ಅಂತವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೋ ಒಂದು ದೊಡ್ಡ ಅಂಗಡಿ ತಪ್ಪು ಮಾಡಿಲ್ಲವೆಂದು ಸಮರ್ಥಿಸಿಕೊಳ್ಳುತ್ತೇವೆ. ಅಂತವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ವಿಜಯೇಂದ್ರಗೆ ಬುದ್ದಿ ಇದ್ಯಾ..? ಬಫರ್ ಯಾವುದು, ಹಳೆಯ ಬ್ಯಾಲೆನ್ಸ್ ಯಾವುದು ಇದೆ ಅಂತ ವಿಜಯೇಂದ್ರ ಗೆ ಗೊತ್ತಿಲ್ಲ. ಪಾಪ ಅವರಿಗೆ ಅನುಭವದ ಕೊರತೆ ಇದೆ. ನಮ್ಮ ಅಶೋಕಣ್ಣನಿಗೆ ಎಲ್ಲಾ ಗೊತ್ತಿದೆ. ಅಧಿಕಾರ ಮಾಡಿದ ಅನುಭವವಿದೆ. ಪಾಪ ಅವರಿಗೆ ಮಾತಾಡುವುದಕ್ಕೆ ಬರಲ್ಲ. ಎಂಟುವರೆ ಲಕ್ಷದಲ್ಲಿ ಬಂದಿದ್ದು, ಆರು ಲಕ್ಷ ಯೂರಿಯಾ. ಇನ್ನು ಒಂದುವರೆ ಲಕ್ಷ ಯೂರಿಯಾ ಬರಬೇಕಿದೆ. ನಾನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಣ್ ಜೊತೆ ಮಾತಾಡಿದ್ದೇನೆ. ಇಲ್ಲಿ ಇರುವವರಿಗೆ ಅದರ ಬಗ್ಗೆ ಗೊತ್ತಿಲ್ಲ. ಕೇಂದ್ರದ ಜೊತೆ ಮಾತನಾಡಿ ಬಾಕಿ ಇರುವ ಯೂರಿಯಾವನ್ನು ಕೊಡಿಸಲಿ ಎಂದು ವಿಜಯೇಂದ್ರ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.


















