ಬೆಂಗಳೂರು: ಸಣ್ಣವರು, ದೊಡ್ಡವರು ಎಂಬ ಪ್ರಶ್ನೆ ಬರುವುದಿಲ್ಲ. ಎಲ್ಲರಿಗೂ ವಿಜಯೇಂದ್ರನೇ (B.Y.Vijayendra) ನಾಯಕ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ಪಕ್ಷದ ತೀರ್ಮಾನ ಇನ್ನೂ ಇಂತಿಮವಾಗಿಲ್ಲ. ಗೋಲ್ಡ್ ಪಿಂಚ್ ನಲ್ಲಿ ಒಂದು ಸಭೆ ಆಗಿತ್ತು. ಪಾದಯಾತ್ರೆ ಅಲ್ಲಿ ಮಾಡಿ ಅಂತಾ ಶ್ರೀರಾಮುಲು ಹೇಳಿದರು. ಆದರೆ, ವಿಜಯೇಂದ್ರ ಪಾದಯಾತ್ರೆಗೆ ಯತ್ನಾಳ್ ವಿರೋಧಿಸಿಲ್ಲ ಅಂದ್ರು. ಅಧ್ಯಕ್ಷರನ್ನ ಬಿಟ್ಟು ಯಾರು ಏನೂ ಮಾಡಿಲ್ಲ. ರಮೇಶ್ ಜಾರಕಿಹೊಳಿ ಸಣ್ಣಪುಟ್ಟ ಮೀಟಿಂಗ್‌ಗೆ ಬಂದಿಲ್ಲ ಅಷ್ಟೇ. ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ.
ಸಿ.ಪಿ.ಯೋಗೇಶ್ವರ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ವೈಯುಕ್ತಿಕ ಅಭಿಪ್ರಾಯಗಳಿಗೆ ನಾನು ಮನ್ನಣೆ ಕೊಡಲ್ಲ. ಅದು ಪಕ್ಷದ ನಿರ್ಧಾರ ಅಲ್ಲ. ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಕೆಲವೊಂದು ನಿರ್ಧಾರ ಅನಿವಾರ್ಯವಾಗುತ್ತದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾವು ಜೆಡಿಎಸ್ ಗೆ ಶರಣಾಗಿಲ್ಲ ಎಂದು ಹೇಳಿದ್ದಾರೆ.