ಬೆಂಗಳೂರು: ನನ್ನ ವಿರುದ್ಧ ಇದ್ದವರು ದೆಹಲಿಗೆ ಹೋಗಿ ನಾಯಕರ ಮುಂದೆ ಅಭಿಪ್ರಾಯ ತಿಳಿಸುವ ಯತ್ನ ಮಾಡುತ್ತಿದ್ದಾರೆ. ಅವರು ಆ ಕಾರ್ಯವನ್ನು ಮಾಡಲಿ. ನಾನು ಸಹ ದೆಹಲಿ ನಾಯಕರ ಸಂಪರ್ಕದಲ್ಲಿದ್ದೇನೆ. ಏನು ಮಾಹಿತಿ ನೀಡಬೇಕೋ ನೀಡಿದ್ದೇನೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾದಾಯಾತ್ರೆ ಆಯೋಜನೆ ಮಾಡಿದ್ದು ಯಾರು? ಬೆಂಗಳೂರಿನಿಂದ ಮೈಸೂರಿಗೆ ಪಾದಾಯಾತ್ರೆ ಮಾಡಿದ್ದು ಯಾರು? ಎಂದು ಪ್ರಶ್ನಿಸಿರುವ ಅವರು, ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಹಾಗೂ ಸಿಎಂ ವಿರುದ್ದ ಹೋರಾಟ ಮಾಡಿದ್ದು ಕಾರ್ಯಕರ್ತರು ಹಾಗೂ ನಾವು. ಈಗಾಗಲೇ ಈ ರೀತಿಯ ಹೇಳಿಕೆಗಳಿಂದ ಕಾರ್ಯಕರ್ತರೆಲ್ಲ ನೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ದೆಹಲಿ ನಾಯಕರ ಮುಂದೆ ಏನು ಅಭಿಪ್ರಾಯ ತಿಳಿಸಬೇಕೋ ತಿಳಿಸಲಿ. ನಾನು ಸಹ ದೆಹಲಿ ನಾಯಕರ ಸಂಪರ್ಕದಲ್ಲಿದ್ದೇನೆ. ಈಗಾಗಲೇ ಕೆಲವು ಮಾಹಿತಿ ಕೊಟ್ಟಿದ್ದೇನೆ. ಮುಂದೆ ಕೂಡ ಏನಾದರೂ ಮಾಹಿತಿ ಬೇಕು ಅಂದರೆ ಕೊಡುತ್ತೇನೆ ಎಂದು ಹೇಳಿದ್ದಾರೆ.