ವಿಜಯಪುರ : ವಿಜಯಪುರದ ಪ್ರತಿಷ್ಠಿತ ಸಿದ್ದೇಶ್ವರ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಸಚಿವ ಶಿವಾನಂದ ಪಾಟೀಲ್ ಬೆಂಬಲಿತ ಹಳೆಯ ತಂಡ ಭರ್ಜರಿ ಗೆಲುವು ಸಾಧಿಸಿದೆ. ಸಚಿವ ಶಿವಾನಂದ ಪಾಟೀಲ್ (ಹಾಗೂ ಬಿಜೆಪಿಯ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿತ ಪೆನಲ್ ಗೆದ್ದು ಬೀಗಿದ್ದು, ಸದ್ಯ ನಗರದಲ್ಲಿ ಸಂಭ್ರಮಾಚರಣೆ ಜೋರಾಗಿದೆ.
19 ಸ್ಥಾನಗಳನ್ನ ಗೆದ್ದ ಪೆನಲ್ : ಸಿದ್ದೇಶ್ವರ ಬ್ಯಾಂಕ್ ಚುನಾವಣೆಯಲ್ಲಿ ಎಲ್ಲಾ 19 ಸ್ಥಾನಗಳಲ್ಲಿ ಸಚಿವ ಶಿವಾನಂದ ಪಾಟೀಲ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ತೀವ್ರ ಸ್ಪರ್ಧೆಯಾಗಿದ್ದ ವಿಜಯಪುರ ಮೇಯರ್ ಎಂ.ಎಸ್ ಕರಡಿ ಸೋಲು ಕಂಡಿದ್ದಾರೆ. ಯತ್ನಾಳ್ ಪರಮಾಪ್ತ, ವಿಜಯಪುರ ಮೇಯರ್ ಎಂ.ಎಸ್ ಕರಡಿ ಹಾಗೂ ಅವರ ಪೆನಲ್ಗೆ ಸೋಲಾಗಿದೆ.
ವಿಜಯಪುರದ ಎಸ್‌ಎಸ್ ಹೈಸ್ಕೂಲ್ ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, 19 ನಿರ್ದೇಶಕ ಸ್ಥಾನಕ್ಕೆ 39 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಯತ್ನಾಳ್ ಭಾಗಿಯಾಗಿಲ್ಲ. ಅವರ ಆಪ್ತ, ಮೇಯರ್ ಎಂ.ಎಸ್ ಕರಡಿ ವೈಯಕ್ತಿಕವಾಗಿ ಪೆನೆಲ್ ಮಾಡಿಕೊಂಡಿದ್ದರು. ಇದೀಗ ಸಚಿವ ಶಿವಾನಂದ ಪಾಟೀಲ್ ಹಾಗೂ ಬಿಜೆಪಿಯ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿತ ಪೆನಲ್ ಗೆದ್ದು ಬೀಗಿದ್ದು, ಗೆದ್ದ ಅಭ್ಯರ್ಥಿಗಳ ಸಂಭ್ರಮಾಚರಣೆ ಜೋರಾಗಿದೆ.