ವಿಜಯಪುರ : ಭೀಮಾತೀರದಲ್ಲಿ ಸಂಚಲನ ಮೂಡಿಸಿದ್ದ ಚಡಚಣ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳನ್ನ ಬಂಧಿಸುವಲ್ಲಿ ವಿಜಯಪುರ ಪೋಲಿಸರು ಯಶಸ್ವಿಯಾಗಿದ್ದರೆ. ಒಟ್ಟು ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಬಿಹಾರ ರಾಜ್ಯದ ರಾಕೇಶ ಕುಮಾರ್ ಸಹಾನಿ, ರಾಜಕುಮಾರ ಪಾಸ್ವಾನ, ರಕ್ಷಕ ಕುಮಾರ್ ಮಾತೋ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿರೆಲ್ಲರೂ 21, 22 ವಯಸ್ಸಿನ ಯುವಕರು.
ಈಗ ಬಂಧಿಸಲಾದ ಮೂವರು ಆರೋಪಿಗಳು ಅಕ್ರಮವಾಗಿ ಪಿಸ್ತೂಲ್ ಪೂರೈಕೆ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ್ದರು. ಮತ್ತೋರ್ವ ಆರೋಪಿ ಮಹಾರಾಷ್ಟ್ರ ರಾಜ್ಯದ ಪ್ರಮುಖ ಆರೋಪಿಯಾಗಿದ್ದು, ಅ.7ರಂದೇ ಆತನನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿತ್ತು. ಆದ್ರೆ ಆತನ ಹೆಸರನ್ನ ಬಹಿರಂಗಪಡಿಸಿಲ್ಲ.
ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಈವರೆಗೆ 9.1 ಕೆಜಿ ಚಿನ್ನ, 86,31,220 ರೂ. ನಗದು ಜಪ್ತಿ ಮಾಡಲಾಗಿದೆ. ಈ ಮುಲಕ ಚಡಚಣ ಬ್ಯಾಂಕ್ ದರೋಡೆಯಲ್ಲಿ ಒಟ್ಟು ನಾಲ್ವರ ಬಂಧನವಾಗಿದ್ದು, ತನಿಖೆ ಮುಂದುವರೆದಿದೆ ಅಂತಾ ಎಡಿಜಿಪಿ ಆರ್ ಹಿತೇಂದ್ರ ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.