ವಿಜಯಪುರ : ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ.
ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯ ಸುಡಗಾಡು ಸಿದ್ದ ಸಮುದಾಯದ ಬಸಮ್ಮ ಕೊಣ್ಣೂರು(21), ಸಂತೋಷ(16), ರವಿ ಕೊಣ್ಣೂರು(15) ಎನ್ನುವರು ಕಾಲು ಜಾರಿ ಶಿರೋಳ ಬಳಿ ಕೆಬಿಜೆಎನ್ಎಲ್ ಎಡದಂಡೆ ಕಾಲುವೆಗೆ ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ.
ಸುಡಗಾಡು ಸಿದ್ದ ಸಮುದಾಯಕ್ಕೆ ಸೇರಿದ ಬಸಮ್ಮ ಕೊಣ್ಣೂರು, ಸಂತೋಷ, ರವಿ ಇಂದು (ನವೆಂಬರ್ 11) ಕೆಬಿಜೆಎನ್ಎಲ್ ಎಡ ದಂಡೆ ಕಾಲುವೆಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಗ್ನಿಶಾಮಕ ದಳ ಸಿಬ್ಬಂದಿಗ ದೌಡಾಯಿಸಿ ನಾಪತ್ತೆಯಾದವರ ಪತ್ತೆಗೆ ಶೋಧ ನಡೆಸಿದ್ದಾರೆ.
ಇದನ್ನೂ ಓದಿ : ದಿಲ್ಲಿ ಸ್ಪೋಟ | ಜೈಶ್ ಮಹಿಳಾ ವಿಂಗ್‌ನ ನಾಯಕಿ, ವೈದ್ಯೆ ಶಾಹಿನಾ ಬಂಧನ



















