ವಿಜಯನಗರ : ಜಮೀನಿನಲ್ಲಿ ಮನೆ ಕಟ್ಟಲು ಪಿಡಿಓ ಪರವಾನಿಗೆ ನೀಡದ ಕಾರಣ ಬೇಸತ್ತ ರೈತ ಗ್ರಾ.ಪಂ.ಯಲ್ಲಿಯೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ಯರಾಮ ಪಂಚಾಯಿತಿಯಲ್ಲಿ ನಡೆದಿದೆ.
ಕಡಬಗೆರೆ ಪಂಚಾಯಿತ್ ವ್ಯಾಪ್ತಿಯ ಪವನಪುರ ಗ್ರಾಮದ ನಿವಾಸಿ ಕೆ. ಬಸವರಾಜ್ ಮನೆ ಕಟ್ಟಲು ಇ-ಸೊತ್ತು ನೀಡುವಂತೆ ಗ್ರಾ.ಪಂಗೆ ಅರ್ಜಿ ಹಾಕಿದ್ದರು. ಆದರೆ ಪರವಾನಿಗೆ ನೀಡದ ಹಿನ್ನೆಲೆ ಪಿಡಿಓ ಕೃಷ್ಣಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪಂಚಾಯಿತಿಯಲ್ಲಿಯೇ ಅರ್ಧ ಲೀಟರ್ ಪೆಟ್ರೋಲ್ ಮೈ ಮೇಲೆ ಸುರಿದುಕೊಂಡ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಇದನ್ನ ನೋಡುತ್ತಿದ್ದ ಪಿಡಿಓ ಕೃಷ್ಣಪ್ಪ, ರೈತನ ರಕ್ಷಣೆ ಮಾಡಿದ್ದಾರೆ. ಆದರೆ ಮನೆ ಕಟ್ಟಲು ಪರವಾನಿಗೆ ನೀಡಿಲ್ಲ ಎಂದು ಆರೋಪಿಸಲಾಗಿದೆ. ಪರವಾನಿಗೆ ಇಲ್ಲದೇ ಬ್ಯಾಂಕ್ ನಲ್ಲಿ ಸಾಲ ಸಿಗುತ್ತಿಲ್ಲ. ಈ ವಿಚಾರವಾಗಿ ಕಳೆದ 6 ತಿಂಗಳಿಂದ ಸುತ್ತಾಡುತ್ತಿರುವ ರೈತ ಇತ್ತೀಚಿಗೆ ಬೇಸತ್ತು ಮೈ ಮೇಲೆ ಪೆಟ್ರೋಲ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಅಕ್ರಮ ದಂಧೆಕೋರರಿಗೆ ಬಿಗ್ ಶಾಕ್ | ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ



















