ವಿಜಯನಗರ: ಹೂವಿನಹಡಗಲಿಯ ದಾಕ್ಷಾಯಣಿ ಲಾಡ್ಜ್‌ನಲ್ಲಿ ಗುತ್ತಿಗೆದಾರ ತಂಗಿದ್ದರು. ತಾವು ತಂಗಿದ್ದ ಕೋಣೆಯಲ್ಲೇ ಭಾನುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಈತ ತಾಲೂಕು ಕ್ರೀಡಾಂಗಣ ಅಭಿವೃದ್ಧಿ ನವೀಕರಣ ಕಾಮಗಾರಿಯಲ್ಲಿ ಗುತ್ತಿಗೆದಾರರಾಗಿದ್ದರು.
ಹುಬ್ಬಳ್ಳಿಯ ಭವಾನಿ ನಗರ ನಿವಾಸಿಯಾದ ಗುತ್ತಿಗೆದಾರ ಆನಂದ್ ಹೆಗೆಡೆ(40) ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ನೇಹಿತರಾದ ಸುಧೀಂದ್ರ,ಗೌರೀಶ್ ಸೇರಿ ಗುತ್ತಿಗೆ ಕಾಮಗಾರಿ ಪಡೆದಿದ್ದರು ಎಂದ ಮಾಹಿತಿ ಬಂದಿದೆ.
ಸ್ಥಳಕ್ಕೆ ಹೂವಿನಹಡಗಲಿ ಪಟ್ಟಣ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಇನ್ನು ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದುಬಂದಿಲ್ಲ
ಇದನ್ನು ಓದಿ : ‘ಶ್ರೀಮುರಳಿ-ರವಿವರ್ಮ’ ಆಕ್ಷನ್ ಬಾಂಬ್..!



















